ಬೆಂಗಳೂರು (Bengaluru) : ಮಾರ್ಚ್ ೭ರಂದು ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (Panchganga Express) ಐದು ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಂಚಗಂಗಾ ಎಕ್ಸ್‌ಪ್ರೆಸ್ (Panchganga Express) ಅನ್ನು ಮಾರ್ಚ್ ೭, ೨೦೨೦ರಂದು ಬೆಂಗಳೂರಿನ (Bengaluru) ಯಶವಂತಪುರ ರೈಲ್ವೆ ಜಂಕ್ಷನ್ (yeshwanthpur) ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಮತ್ತು ಅಂದಿನ ರೈಲ್ವೆ ರಾಜ್ಯ ಸಚಿವ ದಿವಂಗತ ಸುರೇಶ ಸಿ. ಅಂಗಡಿ (Suresh Angadi) ಉದ್ಘಾಟಿಸಿದ್ದರು. ಈ ರೈಲು ಕರಾವಳಿಗರ (Coastal people) ಅತಿ ಬೇಡಿಕೆ ಹೊಂದಿದ್ದು, ಎಲ್ಲ ಸಮಯದಲ್ಲೂ ತುಂಬಿ ತುಳುಕುತ್ತಿರುತ್ತದೆ.
ಇದನ್ನೂ ಓದಿ : ore case/ ಬೇಲೇಕೇರಿ ಅದಿರು ಪ್ರಕರಣದಲ್ಲಿ ಆನಂದ್ ಸಿಂಗ್ ಖುಲಾಸೆ
ಬೆಂಗಳೂರು-ಕಾರವಾರ (Karwar) ಸೇವೆಯು ಆರಂಭದಲ್ಲಿ ಮಂಗಳೂರು (Mangaluru) ಸೆಂಟ್ರಲ್ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಒಟ್ಟು ಪ್ರಯಾಣದ ಸಮಯ ಸುಮಾರು ೧೭ ಗಂಟೆಗಳಾಗಿತ್ತು. ಈ ಸೇವೆಯನ್ನು ಹೆಚ್ಚಾಗಿ ನಿವೃತ್ತ ವ್ಯಕ್ತಿಗಳು ಅಥವಾ ಸಾಕಷ್ಟು ಸಮಯವಿದ್ದ ಜನರು ಬಳಸುತ್ತಿದ್ದರು. ಕಾರ್ಮಿಕ ವರ್ಗದ ವ್ಯಕ್ತಿಗಳು ಮತ್ತು ಸಾಫ್ಟ್‌ವೇರ್ ವೃತ್ತಿಪರರು ವೇಗದ ಸೇವೆಯನ್ನು ಬಯಸಿದಾಗ, ಗ್ರಾಹಕರು ಮಂಗಳೂರು ಸೆಂಟ್ರಲ್ ಅನ್ನು ಬೈಪಾಸ್ ಮಾಡುವ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ : FIR/ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಎಫ್ಐಆರ್
ಆಗಿನ ಉಡುಪಿ (Udupi)-ಚಿಕ್ಕಮಗಳೂರು (Chikkamagaluru) ಸಂಸದೆ ಶೋಭಾ ಕರಂದ್ಲಾಜೆ (Shobha Karandlaje), ಆಗಿನ ಉತ್ತರ ಕನ್ನಡ (Uttara Kannada) ಸಂಸದ ಅನಂತಕುಮಾರ ಹೆಗಡೆ (Ananthkumar Hegde), ಆಗಿನ ಸಚಿವ ಮತ್ತು ಈಗಿನ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojari), ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ (K Jayaprakash Hegde) ಮತ್ತು ಇತರರು ಕರಾವಳಿ ಜನರ ನಿಜವಾದ ಅವಶ್ಯಕತೆಗಳ ಬಗ್ಗೆ ಅಂದಿನ ರೈಲ್ವೆ ರಾಜ್ಯ ಸಚಿವ ದಿ. ಸುರೇಶ ಅಂಗಡಿ ಅವರಿಗೆ ಮನವರಿಕೆ ಮಾಡಿದ್ದರು. ಅದರ ಫಲವಾಗಿ ಪಂಚಗಂಗಾ ಎಕ್ಸ್‌ಪ್ರೆಸ್ ಕಾರ್ಯಾಚರಿಸಲು ಆರಂಭಿಸಿತ್ತು.
ಇದನ್ನೂ ಓದಿ : Intense sun/ ಕರಾವಳಿಯಲ್ಲಿ ತೀವ್ರ ಬಿಸಿಲು; ಎಲ್ಲೆಲ್ಲಿ ಎಷ್ಟು ಗೊತ್ತಾ?