ಭಟ್ಕಳ (Bhatkal) : ತಾಲೂಕಿನ ಪುರವರ್ಗದಲ್ಲಿ ಕಸ ತೆಗೆಯಲು ಹೋದವಗೆ ಹಲ್ಲೆ ನಡೆಸಿದ ದೂರು ದಾಖಲಾಗಿರುವ ಬೆನ್ನಲ್ಲೇ ಆರೋಪಿ ಕಡೆಯಿಂದ ಪಿರ್ಯಾದಿ ಮತ್ತವರ ಕುಟುಂಬದವರ ವಿರುದ್ಧ ಪ್ರತಿದೂರು (counter-complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪುರವರ್ಗ ಮುಗಳಿಹೊಂಡ ನಿವಾಸಿ ಆಯಿಶಾ ಆಫಿರಾ ಸಲಾವುದ್ದೀನ್‌ ಜಬಾಲಿ ಪ್ರತಿದೂರು (counter-complaint) ದಾಖಲಿಸಿದವರು. ಪಕ್ಕದ ಮನೆಯವರಾದ ಅಬ್ದುಲ್‌ ಹಮೀದ್‌ ಉಮರ್‌ ಶೇಖ, ಅಬ್ದುಲ್‌ ವಾಹಿದ್‌ ಉಮರ್‌ ಶೇಖ, ಅಬ್ದುಲ್‌ ಫತಾ ಉಮರ್‌ ಶೇಖ, ತಫ್ರೀನ್‌ ಅಬ್ದುಲ್‌ ಹಮೀದ್‌, ಬಿಬಿ ಸಾಲಿಯಾ ಅಬ್ದುಲ್‌ ವಾಹಿದ್‌ ಮತ್ತು ಅಬ್ದುಲ್‌ ವಸಿಲ್‌ ಅಬ್ದುಲ್‌ ವಾಹಿದ್‌ ವಿರುದ್ಧ ಪ್ರತಿದೂರು ದಾಖಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಸಾಗರ ರಸ್ತೆಯಲ್ಲಿ ಸಿಂಹಗಳ ಹಿಂಡು !?

ಪ್ರತಿದೂರಿನಲ್ಲೇನಿದೆ ? : ಪಿರ್ಯಾದಿ ಆಯಿಶಾ ಆಫಿರಾ ಕಂಪೌಂಡ ಗೇಟ ಮಾಡಲು ಸಿಮೆಂಟಿನ ಪಿಲ್ಲರ ನಿರ್ಮಿಸುತ್ತಿದ್ದಾಗ ಅದನ್ನು ನೋಡಿ ಆರೋಪಿತರು ವಿನಾ ಕಾರಣ ತೊಂದರೆ ಕೊಟ್ಟು ಕೆಲಸಕ್ಕೆ ಅಡ್ಡಿ ಪಡಿಸುತ್ತ ಬಂದಿದ್ದಾರೆ. ಸೆ.೨೫ರಂದು  ಬೆಳಿಗ್ಗೆಯಿಂದ ಗೇಟಿನ ಪಿಲ್ಲರ ಕೆಲಸ ಪ್ರಾರಂಭಿಸಿದಾಗ ಆರೋಪಿತರಾದ ಅಬ್ದುಲ್‌ ಹಮೀದ್‌ ಮತ್ತಿತರರು ಬೆಳಿಗ್ಗೆಯಿಂದಲೇ ಗೇಟಿನ ಸಿಮೆಂಟಿನ ಪಿಲ್ಲರ ಕೆಲಸಕ್ಕೆ ಬಂದ ಕೆಲಸಗಾರರಿಗೆ ಅಡ್ಡಿಪಡಿಸುತ್ತಿದ್ದರು.

ಇದನ್ನೂ ಓದಿ : ರಿಕ್ರಿಯೇಶನ್‌ ಕ್ಲಬ್‌ ಮೇಲೆ ದಾಳಿ; ೮ ಜನರು ವಶಕ್ಕೆ

ಸಾಯಂಕಾಲ ೫.೩೦ ಗಂಟೆ ಸುಮಾರಿಗೆ ಕೆಲಸಗಾರರು ಕೆಲಸ ಮುಗಿಸಿ ಹೋದ ನಂತರ ಫಿರ್ಯಾದಿ ಆಯಿಶಾ ಆಫಿರಾ ಗೇಟಿನ ಹತ್ತಿರ ಇದ್ದಾಗ ಅಲ್ಲಿಗೆ ಬಂದ ಆರೋಪಿತರಿಗೆ ನಮ್ಮ ಕೆಲಸಕ್ಕೆ ತೊಂದರೆ ಕೊಡಬೇಡಿ. ನೀವು ಪಿಲ್ಲರ್‌ ನಿರ್ಮಿಸುವಾಗ ನಾವು ತೊಂದರೆ ಕೊಟ್ಟಿಲ್ಲ. ನಮ್ಮ ಜಾಗದಲ್ಲಿ ನಾವು ಕಟ್ಟಿಸಿಕೊಳ್ಳುವಾಗ ನೀವು ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಆಗ ಆರೋಪಿತರು ಒಮ್ಮೇಲೆ ಸಿಟ್ಟಿಗೆದ್ದು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಆರೋಪಿ ಅಬ್ದುಲ್‌ ಫತಾ ಕಟ್ಟಿಗೆಯ ದೊಣ್ಣೆಯಿಂದ ಎಡಕೈನ ತೋಳಿನ ಮೇಲೆ ಹೊಡೆದಿದ್ದಾನೆ. ಉಳಿದವರಲ್ಲಿ ನಾಲ್ವರು ಕಾಲಿನಿಂದ ಒದ್ದು ತುಳಿದಿದ್ದಾರೆ. ಅಲ್ಲಿಗೆ ಬಂದ ಜನರನ್ನು ನೋಡಿ ವಾಪಸ್ಸಾಗಿದ್ದಾರೆ. ನಿನ್ನನ್ನೆ ಹೀಗೆಯೇ ಬಿಟ್ಟಿದ್ದೇವೆ. ೪ ದಿನಗಳಲ್ಲಿ ಬೆಂಗಳೂರಿನಿಂದ ಜನರನ್ನು ಕರೆಯಿಸಿ ನಿನ್ನನ್ನು ಮುಗಿಸುತ್ತೇನೆ ಎಂದು ಧಮಕಿ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಸ್ಮಶಾನ ಹತ್ತಿರ ಜೂಜಾಡುತ್ತಿದ್ದ ೮ ಜನರು ಪೊಲೀಸ್ ವಶಕ್ಕೆ