ಬೆಂಗಳೂರು (Bengaluru) : ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಗಮನ ಸೆಳೆದಿರುವ ನಟ ಆದಿ ಪಿನಿಶೆಟ್ಟಿ ಅಭಿನಯದ ಚಿತ್ರ ‘ಶಬ್ದ’ ಫೆಬ್ರವರಿ 28ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ (Film Release). ಈ ಹಾರರ್-ಥ್ರಿಲ್ಲರ್ ಚಿತ್ರವನ್ನು ಅರಿವಳಗನ್ ವೆಂಕಟಾಚಲಂ ನಿರ್ದೇಶಿಸಿದ್ದು, 7G ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚಿತ್ರದಲ್ಲಿ ಲಕ್ಷ್ಮಿ ಮೆನನ್, ಲೈಲಾ ಮತ್ತು ಸಿಮ್ರನ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ಎಸ್ ತಮನ್ ಸಂಗೀತ ನಿರ್ದೇಶನ, ಅರುಣ್ ಪದ್ಮನಾಭನ್ ಛಾಯಾಗ್ರಹಣ ಮತ್ತು ವಿಜೆ ಸಾಬು ಜೋಸೆಫ್ ಅವರ ಸಂಕಲನದೊಂದಿಗೆ ಈ ಚಿತ್ರ ಇನ್ನಷ್ಟು ವಿಶೇಷವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಆಡಿಯೋ ಮತ್ತು ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ (Film Release) ಎಂದು ಚಿತ್ರತಂಡ ತಿಳಿಸಿದೆ.
ವಿಡಿಯೋ ಸಹಿತ ಇದನ್ನೂ ಓದಿ : ದ್ವೇಷಕ್ಕೆ ಆಹುತಿಯಾಯ್ತಾ ಹಣ್ಣಿನ ಅಂಗಡಿ !