ಅಂಕೋಲಾ (Ankola): ಜೀವನದಲ್ಲಿ ಜಿಗುಪ್ಸೆಗೊಂಡು ಗಂಡ- ಹೆಂಡತಿ ಇಬ್ಬರೂ ಇಲಿಮದ್ದನ್ನು ಸೇವಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಗಂಡ ಮೃತಪಟ್ಟಿದ್ದರೆ, ಹೆಂಡತಿ ಚಿಕಿತ್ಸೆಯಲ್ಲಿದ್ದಾಳೆ. ಈ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಕೋಲಾ ತಾಲೂಕಿನ ಕೊಡ್ಲಗದ್ದೆಯ ಸತೀಶ ಮಾರು ಪಟಗಾರ (೪೫) ಮೃತ ವ್ಯಕ್ತಿ. ಇವರ ಹೆಂಡತಿ ಶೋಭಾ (೩೮) ಕಾರವಾರದ (Karwar) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಸತೀಶ ಸಾರಾಯಿ ಚಟಕ್ಕೆ ದಾಸನಾಗಿದ್ದು, ಇದರಿಂದಾಗಿ ಮನೆಯಲ್ಲಿ ಜಗಳವಾಗುತ್ತಿತ್ತು. ಸಾರಾಯಿ ಕುಡಿಯಬಾರದಾಗಿ ಹೇಳಿದರೂ ಸತೀಶ ಕೇಳುತ್ತಿರಲಿಲ್ಲ. ನ.೩ರಂದು ಸಂಜೆ ೪ರ ಸುಮಾರಿಗೆ ಅಣ್ಣನ ಮನೆಗೆ ಬಂದ ಸತೀಶ ತಾನು ಮತ್ತು ತನ್ನ ಹೆಂಡತಿ ಇಲಿಮದ್ದನ್ನು ಸೇವಿಸಿದ ಬಗ್ಗೆ ತಿಳಿಸಿದ್ದರು.

ಇದನ್ನೂ ಓದಿ :  ಹೆಜ್ಜೇನು ದಾಳಿಗೆ ವೃದ್ಧೆ ಬಲಿ

ತಕ್ಷಣ ಇಬ್ಬರನ್ನೂ ಯಲ್ಲಾಪುರ (Yallapur) ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನ. ೬ರಂದು ನಸುಕಿನ ಜಾವ ೧.೪೫ರ ಸುಮಾರಿಗೆ ಸತೀಶ ಕೊನೆಯುಸಿರು ಎಳೆದಿದ್ದಾರೆ. ಅವರ ಹೆಂಡತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ತಮ್ಮ ಸಂಸಾರದ  ಯಾವುದೋ ವಿಷಯಕ್ಕೆ ಬೇಸರಗೊಂಡು ಇಲಿಮದ್ದು ಸೇವಿಸಿರಬೇಕು ಎಂದು ಮೃತರ ಅಕ್ಕ ಶಾಂತಿ ಪಟಗಾರ ದೂರಿನಲ್ಲಿ (Complaint) ತಿಳಿಸಿದ್ದಾರೆ. ಪ್ರಕರಣ (FIR) ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸ್‌ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ :   ಊಟ ಮಾಡುತ್ತಿರುವಾಗಲೇ ಎದೆನೋವು, ಮಹಿಳೆ ಸಾವು