ಕಾರವಾರ (Karwar) : ಗೋವಾದ (Goa) ಟಿಸ್ಕ್ ಉಸ್ಗಾವೊದಲ್ಲಿ ನಡೆದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೋಂಡಾ ಪೊಲೀಸರು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿ (FIR Registered), ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪೊಲೀಸರ ಪ್ರಕಾರ, ಕಾರವಾರದ ಅಪ್ರಾಪ್ತ ಬಾಲಕಿಯನ್ನು ಮದುವೆಗೆ ಟಿಸ್ಕ್-ಉಸ್ಗಾವ್ಗೆ ಕರೆಸಲಾಗಿತ್ತು. ಸುಮಾರು ಎಂಟು ದಿನಗಳ ನಂತರ, ಚಿಂಬೆಲ್‌ನ ೨೮ ವರ್ಷದ ಪತಿಗೆ ಕೆಲವು ತಿಂಗಳ ಹಿಂದೆ ವಿವಾಹವಾಗಿದೆ ಎಂಬುದು ಬಾಲಕಿಗೆ ಗೊತ್ತಾಗಿ ಕಾರವಾರದ ತನ್ನ ಕುಟುಂಬಕ್ಕೆ ವಿಷಯವನ್ನು ತಿಳಿಸಿದ್ದಳು. ನಂತರ ಅಪ್ರಾಪ್ತ ಬಾಲಕಿಯನ್ನು ಕುಟುಂಬದವರು ಕಾರವಾರಕ್ಕೆ ವಾಪಸ್ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಹೊನ್ನಾವರದ ಸಮರ್ಥಗೆ ಬೆಳ್ಳಿ ಪದಕ
ಈ ವಿಷಯ ತಿಳಿದ ಅಂಗನವಾಡಿ (Anganwadi) ಕಾರ್ಯಕರ್ತೆಯೊಬ್ಬರು ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು (FIR Registered). ನಂತರ ಪೋಂಡಾ ಪೊಲೀಸ್ ಠಾಣೆಗೆ ದೂರು ರವಾನಿಸಲಾಗಿತ್ತು. ದೂರಿನ ಮೇರೆಗೆ ಪೋಂಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಪ್ರಾಪ್ತ ಬಾಲಕಿಯ ಪತಿಯನ್ನು ಬಂಧಿಸಿ, ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾವೇರಿ (Haveri) ಮತ್ತು ಕಾರವಾರದ ತಲಾ ಓರ್ವ ವ್ಯಕ್ತಿ ಮತ್ತು ಟಿಸ್ಕ್-ಉಸ್ಗಾವೊದ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ತಹಶೀಲ್ದಾರ (Tahasildar) ವಿಜಯನಾಥ ಕಾವ್ಲೇಕರ ಮಾರ್ಗದರ್ಶನದಲ್ಲಿ ಪಿಎಸ್ ಐ ಅಂಜಲಿ ಧೂಳಪಕರ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : RNS ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ