ಶಿರಸಿ (Sirsi) : ತಲೆ ಸುತ್ತು ಬಂದು ಎಚ್ಚರ ತಪ್ಪಿ ಬಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದ ಬಗ್ಗೆ ಬನವಾಸಿ (Banavasi) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (FIR).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಸಿ ತಾಲೂಕಿನ ಬೆಂಗಳೆ ಓಣಿಕೇರಿಯ ಶೈಲಾ ಸುಬ್ರಾಯ ಹೇಮಾದ್ರಿ (೨೭) ಮೃತರು. ಮೂಲತಃ ದಾಂಡೇಲಿ (Dandeli) ಪೋಟೋಳಿಯವರಾದ ಇವರನ್ನು ಶಿರಸಿಯ ಸುಬ್ರಾಯ ಹೇಮಾದ್ರಿ ಮದುವೆಯಾಗಿದ್ದರು. ಇವರು ಹಲವು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಗಂಡನ ಮನೆಯಲ್ಲಿ ಇದ್ದಾಗ ತಲೆ ಸುತ್ತು ಬಂದು ಎಚ್ಚರ ತಪ್ಪಿ ಬಿದ್ದಿದ್ದರು. ಅವರನ್ನು ತಕ್ಷಣ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಶಿರಸಿ ಟಿಎಸ್‌ಎಸ್‌ ಆಸ್ಪತ್ರೆಗೆ (TSS hospital) ಕರೆದೊಯ್ಯಲಾಗಿತ್ತು.

ಇದನ್ನೂ ಓದಿ :  ಆಟೋರಿಕ್ಷಾದಿಂದ ಕೆಳಗೆ ಬಿದ್ದ ಬಾಲಕಗೆ ಗಾಯ

ಆದರೆ ಅದಾಗಲೇ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಮೃತ ಯುವತಿಯ ತಂದೆ ಚಂದ್ರಶೇಖರ ಕೃಷ್ಣಪ್ಪ ಹೆಗಡೆ (೬೭) ಬನವಾಸಿ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (FIR) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :   ನ.೧೩ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ