ಭಟ್ಕಳ (Bhatkal) : ಇಲ್ಲಿನ ಶಂಸುದ್ದಿನ್ ಸರ್ಕಲ್ ಸಮೀಪವಿರುವ ರಾಯಲ್ ಓಕ್ ನ ರಾಯಲ್ ಆತಿಥ್ಯ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ಹೊಗೆ ಹೋಗುವ ಚಿಮಣಿಗೆ ಮತ್ತು ಎಣ್ಣೆ ಬಾಂಡಲಿಗೆ ಬೆಂಕಿತಾಗಿ ಅಗ್ನಿ ಅವಘಡ (fire accident) ಸಂಭವಿಸಿತ್ತು. ಅದೃಷ್ಟವಶಾತ್‌ ಭಾರಿ ಅನಾಹುತ ತಪ್ಪಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸೋಮವಾರ ಮಧ್ಯಾಹ್ನ ವೇಳೆಗೆ ರಾಯಲ್ ಓಕ್ ನ ರಾಯಲ್ ಆತಿಥ್ಯ ವೆಜ್ ಹೋಟೆಲ್‌ನಲ್ಲಿ ಈ ಅಗ್ನಿ ಅವಘಡ (fire accident) ಸಂಭವಿಸಿದೆ. ಬೆಂಕಿಯು ಹೋಟೆಲ್ ಮೇಲ್ಭಾಗದ ಚಿಮಣಿಯಲ್ಲಿ ಆವರಿಸಿತ್ತು. ತಕ್ಷಣ ಅಲ್ಲಿದ್ದ ಸ್ಥಳೀಯರು ಹೋಟಲ್ ಒಳಭಾಗಕ್ಕೆ ಪ್ರವೇಶಿಸಿ ಅಡುಗೆ ಕೋಣೆಯಲ್ಲಿದ್ದ ಸಿಲೆಂಡರ್ ಗಳನ್ನು ಗ್ಯಾಸ್ ಓಲೆಗಳಿಂದ ತಪ್ಪಿಸಿ ಹೋಟೆಲ್‌ನ ಹೊರಭಾಗಕ್ಕೆ ತಂದು ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಇದನ್ನೂ ಓದಿ : Punar Pratistha/ ಶಿಲಾಮಯ ದೇಗುಲದಲ್ಲಿ ಪುನರ್‌ ಪ್ರತಿಷ್ಠಾ ಕಾರ್ಯಕ್ರಮ