ಭಟ್ಕಳ (Bhatkal): ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗಿದ್ದ ಮೀನುಗಾರ ದೋಣಿಯಲ್ಲಿಯೇ ಮೃತಪಟ್ಪಿದ್ದಾನೆ (Fisherman died).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಾಲಿ ಮಾವಿನಕುರ್ವೆ ಅಳ್ವೆಕೋಡಿ ಸಣಬಾವಿಯ ನರಸಿಂಹ ಧರ್ಮಾ ಮೊಗೇರ (49) ಮೃತರು. ಇವರು ಗುರುವಾರ ಬೆಳಿಗ್ಗೆ ೫.೩೦ಕ್ಕೆ ಎದ್ದು ಮೀನುಗಾರಿಕೆಗೆ ಹೋಗಿದ್ದರು. ಮೀನು ಹಿಡಿಯುವ ವೇಳೆ ತಲೆಸುತ್ತು ಬಂದು ದೋಣಿಯಲ್ಲಿ ಬಿದ್ದ ಮೃತಪಟ್ಟಿದ್ದಾರೆ (fisherman died).

ಇದನ್ನೂ ಓದಿ : ವಕ್ಫ್ ತಿದ್ದುಪಡಿ ಕಾಯ್ದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಹುಬ್ಬಳ್ಳಿಗೆ

ನರಸಿಂಹರ ಅಣ್ಣನ ಮಗಳು ತೃಪ್ತಿ ಮೊಗೇರ ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು (case registered) ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :‌ ಲಾರಿಯಲ್ಲಿಯೇ ಎದೆನೋವಿನಿಂದ ಕ್ಲೀನರ್‌ ಸಾವು