ಭಟ್ಕಳ: ಮೀನುಗಾರಿಕೆಗೆ ತೆರಳುವ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತಪಟ್ಟ ದುರ್ಘಟನೆ (Fisherman died) ಭಟ್ಕಳ (Bhatkal) ತಾಲೂಕಿನ ಮಾವಿನಕುರ್ವಾ ಬಂದರಿನಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾಯ್ಕಿಣಿ ಮೂಡಕೇರಿ ಬಸ್ತಿ ನಿವಾಸಿ ಶಂಕರ ತಂದೆ ಸಣ್ಣತಮ್ಮ ನಾಯ್ಕ (40) ಮೃತರಾಗಿದ್ದಾರೆ. ದೂರು ಪ್ರಕಾರ, ಶಂಕರ ನಾಯ್ಕ ಅವರು ರಾತ್ರಿ ಸಮಯದಲ್ಲಿ ಮೀನುಗಾರಿಕೆಗೆ ಹೊರಡುವ ಉದ್ದೇಶದಿಂದ ಬಂದರಿನಲ್ಲಿ ನಿಲ್ಲಿಸಿದ್ದ ಬೋಟಿಯಲ್ಲಿ ಬಲೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ದಕ್ಕೆಯಿಂದ ಬೋಟಿಗೆ ಹತ್ತಲು ಯತ್ನಿಸಿದಾಗ, ದಕ್ಕೆ ಹಾಗೂ ಬೋಟಿಯ ಮಧ್ಯೆ ಆಳವಾದ ನೀರಿನ ಭಾಗದಲ್ಲಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಮೇಲಕ್ಕೆ ಬರಲು ಸಾಧ್ಯವಾಗದೇ ಅವರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ(Fisherman died).

ಇದನ್ನು ಓದಿ: Assault/ ನೆರೆಮನೆಯವರಿಂದ ಮಹಿಳೆಯ ಮೇಲೆ ಹಲ್ಲೆ

ಈ ಕುರಿತು ಮೃತನ ಪತ್ನಿ ಗಿರಿಜಾ ಕೋಂ. ಶಂಕರ ನಾಯ್ಕ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಕರಾವಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ 112 ಇಆರ್‌ಎಸ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: bikers injured/ ಡಿಗ್ಗರ್ ಟ್ರಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರಿಗೆ ಗಾಯ