ಕಾರವಾರ (Karwar) : ಮೀನಿಗೆ ಗಾಳಹಾಕಲು (Fishing) ಸಮುದ್ರ ತೀರಕ್ಕೆ ಹೋಗಿದ್ದ ಮೀನುಗಾರ ಆಕಸ್ಮಿಕವಾಗಿ ಸಮುದ್ರದಲ್ಲಿ (Arabian Sea) ಬಿದ್ದು ಮೃತಪಟ್ಟ ಘಟನೆ  ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ ಬೈತಕೋಲ ನಿವಾಸಿ ಗಜಾನನ ಕೃಷ್ಣ ಗೌಡ (೩೪) ಮೃತ ದುರ್ದೈವಿ. ಇವರು ನ.೧ರಂದು ಮಧ್ಯಾಹ್ನ ಗಾಳಹಾಕಿ ಮೀನು ಹಿಡಿಯಲು (Fishing) ಬೈತಕೋಲ ಲೇಡಿ ಬೀಚ್‌ಗೆ (Lady beach) ಹೋಗಿದ್ದರು. ಗಾಳ ಹಾಕಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಸಮುದ್ರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಮರುದಿನ ನ.೨ರಂದು ಮಧ್ಯಾಹ್ನ ೩.೩೦ರ ಸುಮಾರಿಗೆ ಸಮುದ್ರದಲ್ಲಿ ಮೃತದೇಹ ತೇಲುವುದು ಕಂಡುಬಂದಿದೆ.

ಇದನ್ನೂ ಓದಿ :  ಪಟಾಕಿ ವಿರೋಧಿಸಿದ ವೃದ್ಧನನ್ನು ಹೊಡೆದು ಕೊಂದ ದುಷ್ಕರ್ಮಿಗಳು !

ಕರಾವಳಿ ಕಾವಲು ಪಡೆ (Coastal security) ಪೊಲೀಸರು ಮೃತದೇಹವನ್ನು ತೆಗೆದುಕೊಂಡು ದಡಕ್ಕೆ ತಂದಿದ್ದಾರೆ. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಮೃತನ ಸಹೋದರ ಸದಾನಂದ ಕೃಷ್ಣ ಗೌಡ ಕಾರವಾರ ಶಹರ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಸಹೋದರನ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಶಹರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಕೇವಲ ಧರ್ಮ ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು?