ಭಟ್ಕಳ (Bhatkal) : ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (Sudhindra College) ನೆದರ್ಲ್ಯಾಂಡ್’ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೈಜೀರಿಯಾ ಮೂಲದ ಅಮೀರಾ ಮುಸ್ತಫಾ ಹಾಗೂ ಲಕ್ಸಂಬರ್ಗ್ ಮೂಲದ ರೀನಾ ಮರಿನಾ, ನೆದರ್ಲ್ಯಾಂಡ್’ನ ಶಿಕ್ಷಣ ಕ್ರಮ ಹಾಗೂ ವಿಶ್ವವಿದ್ಯಾಲಯದಲ್ಲಿ ಇರುವಂತಹ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ನೆದರ್ಲ್ಯಾಂಡ್’ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತದ ಡಾ. ಪ್ರಿನ್ಸಿಟಾ ಭಾರತೀಯ ಶಿಕ್ಷಣ ಪದ್ಧತಿ ಹಾಗೂ ನೆದರ್ಲ್ಯಾಂಡ್’ನ ಶಿಕ್ಷಣ ಪದ್ಧತಿಯ ಸಾಮ್ಯತೆ-ವ್ಯತ್ಯಾಸವನ್ನು ತಿಳಿಸುತ್ತಾ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ : Yasin Bhatkal/ ಕೋರ್ಟ್‌ಗೆ ಐಎಂ ಕಾರ್ಯಕರ್ತರ ಹಾಜರಾತಿಗೆ ಹೈಕೋರ್ಟ್‌ ನಿರ್ದೇಶನ

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ್ ನಾಯಕ ರವರು ಮಾತನಾಡಿ, ಇದೊಂದು ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಶ್ರೀ ಗುರು ಸುಧೀಂದ್ರ ಕಾಲೇಜಿನ (Sudhindra College) ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರು. ಟ್ರಸ್ಟಿ ನಾಗೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಾಗೂ ನೆದರ್ಲ್ಯಾಂಡ್ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಪರಸ್ಪರ ಜ್ಞಾನ ಮಂಥನಕ್ಕೆ ಕಾರಣವಾಗಿ, ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಸಾಕ್ಷೀಕರಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ : Life imprisonment/ ಗಂಡನ ಕೊಂದ ಭಟ್ಕಳದ ಮಹಿಳೆಗೆ ಜೀವಾವಧಿ ಶಿಕ್ಷೆ