ಕಾರವಾರ (Karwar): ಕೇಂದ್ರ ಸರ್ಕಾರ (Central Government) ಮಂಗಳವಾರ (ಮೇ ೨೦) ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ (Karnataka Highcourt Judge) ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ (Justice K Somashekhar) ಅವರನ್ನು ಮಣಿಪುರ ಹೈಕೋರ್ಟ್‌ನ (Manipur Highcourt) ಮುಖ್ಯ ನ್ಯಾಯಮೂರ್ತಿಯಾಗಿ (Chief Justice) ನೇಮಕ ಮಾಡಿರುವುದಾಗಿ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಕಾನೂನು ಸಚಿವ (Central Law Minister) ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಈ ನೇಮಕಾತಿಗೆ ಸಂಬಂಧಿಸಿದಂತೆ ‘X’ ನಲ್ಲಿ ಪ್ರಕಟಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಣಿಪುರ ಹೈಕೋರ್ಟ್‌ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (Chief Justice) ಡಿ. ಕೃಷ್ಣಕುಮಾರ್ ಮೇ ೨೧ರಂದು ನಿವೃತ್ತರಾಗುತ್ತಿರುವ ಹಿನ್ನೆಲೆ ಸುಪ್ರೀಂ ಕೋರ್ಟ್ (Supreme Court) ಕೊಲಿಜಿಯಂ ಮೇ ೧೫ರಂದು ನಡೆದ ಸಭೆಯಲ್ಲಿ, ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಿತ್ತು.
ಇದನ್ನೂ ಓದಿ : Karwar naval base/೫ನೇ ಶತಮಾನದ ಶೈಲಿಯ ಹಡಗು ಅನಾವರಣ
ನ್ಯಾಯಮೂರ್ತಿ ಸೋಮಶೇಖರ ದಿನಾಂಕ ೨೭-೦೧-೧೯೯೦ರಂದು ವಕೀಲರಾಗಿ ದಾಖಲಾದರು. ಮೈಸೂರು (Mysuru) ಮತ್ತು ಚಾಮರಾಜನಗರ (Chamarajnagar) ಜಿಲ್ಲೆಗಳಲ್ಲಿ ಸಿವಿಲ್ (civil) ಮತ್ತು ಕ್ರಿಮಿನಲ್ (criminal) ಎರಡೂ ಕಡೆಗಳಲ್ಲಿ ಅಭ್ಯಾಸ ಮಾಡಿದರು. ದಿನಾಂಕ ೧೭.೦೬.೧೯೯೮ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ (District and Session Judge) ನೇಮಕ ಮಾಡಲಾಯಿತು. ವಿಜಯಪುರ (Vijayapura) ಮತ್ತು ಬೆಂಗಳೂರು ನಗರ (Bengaluru City) ಸಿವಿಲ್ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : lightning strike/ ಶಿರೂರು ಗುಡ್ಡಕುಸಿತದಲ್ಲಿ ಪಾರಾದವ ಸಿಡಿಲು ಬಡಿದು ಸಾವು
ಉತ್ತರ ಕನ್ನಡ (Uttara Kannada), ಹಾಸನ (Hassan), ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ, ಚಿತ್ರದುರ್ಗ (Chitradurga) ಮತ್ತು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ಹೈಕೋರ್ಟ್‌ನ ರಿಜಿಸ್ಟ್ರಾರ್ ನ್ಯಾಯಾಂಗ ಮತ್ತು ರಿಜಿಸ್ಟ್ರಾರ್ ವಿಜಿಲೆನ್ಸ್ ಆಗಿಯೂ ನ್ಯಾ. ಕೆ.ಸೋಮಶೇಖರ ಸೇವೆ ಸಲ್ಲಿಸಿದ್ದಾರೆ. ನವೆಂಬರ್ ೧೪, ೨೦೧೬ರಂದು ಅವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ನವೆಂಬರ್ ೩, ೨೦೧೮ರಂದು ಶಾಶ್ವತ ನ್ಯಾಯಾಧೀಶರಾದರು.
ಇದನ್ನೂ ಓದಿ : Sirsi/ ಶಿರಸಿಯಲ್ಲಿ ಅಪಘಾತ; ಮುರ್ಡೇಶ್ವರದ ವ್ಯಕ್ತಿಯಿಂದ ದೂರು