ಭಟ್ಕಳ (Bhatkal): ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ (Urban Bank) ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆ ಫೆ.೨ರಂದು ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆದು ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆಯುವ ಸಂದರ್ಭದಲ್ಲಿ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಒಟ್ಟೂ ೧೫ ಕ್ಷೇತ್ರಗಳಲ್ಲಿ ೯ ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಜಾತಿ ಕ್ಷೇತ್ರ ೧, ಪರಿಶಿಷ್ಟ ಪಂಗಡ ಕ್ಷೇತ್ರ ೧, ಮಹಿಳಾ ಮೀಸಲು ಕ್ಷೇತ್ರ ೨, ಹಿಂದುಳಿದ ವರ್ಗ “ಅ” ಮೀಸಲು ೧, ಹಿಂದುಳಿದ ವರ್ಗ “ಬ” ಮೀಸಲು ೧ ಕ್ಷೇತ್ರಗಳಿವೆ. ಅವುಗಳಲ್ಲಿ ಮಹಿಳಾ ಮೀಸಲು ಕ್ಷೇತ್ರಕ್ಕೆ ಅವಿರೋಧವಾಗಿ ಸಚಿವ ಮಂಕಾಳ ವೈದ್ಯರ (Mankal Vaidya) ಪುತ್ರಿ ಬೀನಾ ಮತ್ತು ಮೆಹಬೂಬಿ ಬಾಬಾಲಾಲ್ ಸಾಹಿಬ್ ಪಟೇಲ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಅ ಕ್ಷೇತ್ರಕ್ಕೆ ಸುರೇಶ ಭಾಸ್ಕರ ಪೂಜಾರಿ, ಸಾಮಾನ್ಯ ಕ್ಷೇತ್ರಕ್ಕೆ ಮೊಹಮ್ಮದ್ ಅಯೂಬ್ ಹಮ್ಜಾ ಆಯ್ಕೆಯಾಗಿದ್ದಾರೆ.
ಇದನ್ನು ಓದಿ : Hubballi/ ಚಾಕು ಇರಿದವರಿಗೆ ಗುಂಡಿನೇಟು
ಉತ್ತರ ಕನ್ನಡ ಜಿಲ್ಲಾ ಸಾಮಾನ್ಯ ಮತಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಒಟ್ಟೂ ೧೬ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಬ್ದುಲ ಖಾಲಿಕ್ ಅಬ್ದುಲ ಹಾದಿ ಸೌದಾಗರ, ಅಹ್ಮದ್ ನಬೀ ಮೆಹಬೂಬ ಸಾಬ ಮುಲ್ಲಾ, ಈರಾ ದುರ್ಗಪ್ಪ ನಾಯ್ಕ, ಜಾಫರ್ ಸಾದಿಕ್ ಇಸ್ಮಾಯಿಲ್ ಶಾಬಂದ್ರಿ, ತೌಸೀಫ್ ಅಬ್ದುಲ್ ವಹಾಬ್ ಶೇಖ, ನದೀಮ ಅಹ್ಮದ್ ಮುಲ್ಲಾ, ನಸೀಮುಲ್ ಘನಿ ಇಸ್ಮಾಯಿಲ್ ಶಾಬಂದ್ರಿ, ಪದ್ಮನಾಭ ರಾಮಕೃಷ್ಣ ಪೈ, ಮಹ್ಮದ್ ಜುಬೇರ ಮೊಹಿದ್ದೀನ್ ಕೋಲಾ, ರಮೇಶ ಸುಕ್ರ ನಾಯ್ಕ, ರಾಮ ಬಿನ್ ತಿಮ್ಮಣ್ಣ ನಾಯ್ಕ, ವಸಂತ ತಿಮ್ಮಯ್ಯ ದೇವಾಡಿಗ, ವಿಕ್ಟರ್ ಫ್ರಾನ್ಸಿಸ್ ಗೋಮ್ಸ್, ಶ್ರೀಕಾಂತ ನಾರಾಯಣ ನಾಯ್ಕ, ಶ್ರೀಧರ ಭೈರಪ್ಪ ನಾಯ್ಕ, ಸೈಯದ್ ಜೈನುಲ್ಲಾಬಿದಿನ್ ಫಾರೂಕಿ ಅಬ್ದುಲ್ ಖಾದಿರ್ ಸ್ಪರ್ಧೆಯಲ್ಲಿದ್ದಾರೆ.
ಇದನ್ನು ಓದಿ : Recreation Club/ ಪೊಲೀಸರ ವಿರುದ್ಧ ಅಸೋಸಿಯೇಶನ್ ಆಕ್ರೋಶ
ಉಡುಪಿ (Udupi) ಜಿಲ್ಲಾ ಸಾಮಾನ್ಯ ಮತಕ್ಷೇತ್ರದಲ್ಲಿ ಅಬ್ದುಲ್ ವಹಾಬ್ ಇಬ್ರಾಹಿಂ, ತುಳಸಿದಾಸ ಮಾಸ್ತಿ ಮೊಗೇರ ಕಣದಲ್ಲಿದ್ದಾರೆ. ಮೀಸಲಾತಿಯಡಿಯಲ್ಲಿ ಹಿಂದುಳಿದ ವರ್ಗ ಬ ಕ್ಷೇತ್ರಕ್ಕೆ ಫಿಲೀಫ್ ಆರ್. ಅಲ್ಮೇಡಾ, ಮನ್ಯುಯಲ್ ಎಂ. ಲೀಮಾ, ಸೈಮನ್ ಲೀನ್ ಡಿಸೋಜಾ ಕಣದಲ್ಲಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಮೋಹನ ಭದ್ರ ಶಿರಾಲಿಕರ, ಗಣಪತಿ ಗೋಯ್ದ ಮೊಗೇರ, ಮಾಸ್ತಿ ದುರ್ಗಪ್ಪ ಮೊಗೇರ, ಮಾಸ್ತಿ ಸಂಕಯ್ಯ ಮೊಗೇರ ಕಣದಲ್ಲಿದ್ದಾರೆ. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ರಾಘವೇಂದ್ರ ದುರ್ಗಯ್ಯ ಗೊಂಡ, ಸಂತೋಷ ನಾಗಯ್ಯ ಗೊಂಡ ಕಣದಲ್ಲಿದ್ದಾರೆ. ಅರ್ಬನ್ ಬ್ಯಾಂಕ್ (Urban Bank) ಚುನಾವಣಾಧಿಕಾರಿ ಜಿ. ಕೆ. ಭಟ್ ಕ್ರಮಬದ್ಧ ಅಭ್ಯರ್ಥಿಗಳ ಯಾದಿಯನ್ನು ಪ್ರಕಟಿಸಿದ್ದಾರೆ.
ಇದನ್ನು ಓದಿ : Power Outage/ ಕಾರವಾರ, ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ