ಭಟ್ಕಳ (Bhatkal) : ಅಂಜುಮನ ಇಂಜಿನಿಯರ್ ಕಾಲೇಜು (Anjuman Engineering college) ಸಮೀಪವಿರುವ ಪುರಸಭೆ ವಾಟರ್ ಫಿಲ್ಟರ್ ಟ್ಯಾಂಕ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ (ganja prohibition).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಗ್ದುಂ ಕಾಲೋನಿಯ ಹಿಲಾಲ್ ಸ್ಟ್ರೀಟ್ ನಿವಾಸಿ ಮೊಹಮ್ಮದ ಜೀಯಾಮ್ ಸಿರಾಜುಲ್ ಹಸನ್, ಬೆಳ್ನಿ ನಿವಾಸಿ ನಸಿರುದ್ದೀನ ಶೇಖ ಗುಲಾಮ್ ಮೊಹಿದ್ದೀನ್, ಮಗ್ದುಂ ಕಾಲೋನಿಯ ಆಜಾದ್ ನಗರ ನಿವಾಸಿ ನೌಮಾನ್ ಮೌಲಾ ಶೇಖ ಮತ್ತು ನ್ಯಾಶನಲ್ ರಸ್ತೆ ನಿವಾಸಿ ಮೊಹಮ್ಮದ ಫಾನ್ ಮೊಹಮ್ಮದ ಇರ್ಷಾದ್ ಬಂಧಿತರು. ಈ ನಾಲ್ವರು ಭಟ್ಕಳದ ಅಂಜುಮನ ಇಂಜಿನಿಯರ್ ಕಾಲೇಜಿನ ಸಮೀಪ ಇರುವ ಪುರಸಭೆ ವಾಟರ್ ಫಿಲ್ಟರ್ ಟ್ಯಾಂಕ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ : ವಿಚಾರ ಕ್ರಾಂತಿ ರತ್ನ ಪ್ರಶಸ್ತಿ ಗೌರವ
ಈ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ೧೫ ಸಾವಿರ ಮೌಲ್ಯದ ೩೭೦ ಗ್ರಾಂ ಗಾಂಜಾ ಹಾಗೂ ೩ ಸಾವಿರ ಮೌಲ್ಯದ ೧.೮ ಗ್ರಾಂ MDMA(Methaphetamine) ನಿಷೇದಿತ ಮಾದಕ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ಪದಾರ್ಥಗಳನ್ನು ಇಟ್ಟುಕೊಂಡಿದ್ದ ಹುಂಡೈ ಕಂಪನಿಯ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ (ganja prohibition). ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ : Landslide/ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಒತ್ತಾಯ
ಡಿವೈಎಸ್ಪಿ ಮಹೇಶ ಎಂ.ಕೆ. ಮಾರ್ಗದರ್ಶನದಲ್ಲಿ ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ. ಕೆ.ಆರ್. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ. ನವೀನ ಎಸ್ ನಾಯ್ಕ, ಸಿಬ್ಬಂದಿ ಅರುಣ ಪಿಂಟೋ, ದೀಪಕ ಎಸ್. ನಾಯ್ಕ, ಮದಾರಸಾಬ ಚಿಕ್ಕೇರಿ, ದೇವು ರಾಮಾ ನಾಯ್ಕ, ಕಿರಣಕುಮಾರ ನಾಯ್ಕ, ಕೃಷ್ಣಾ ಎನ್.ಜಿ., ಅನೀಲ ರಾಠೋಡ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಹಿರೇಮಠ, ಕಿರಣ ಪಾಟೀಲ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಮದುವೆ ಮನೆಯಲ್ಲಿ ಜಗಳ; ಮೂವರಿಂದ ಹಲ್ಲೆ