ಭಟ್ಕಳ (Bhatkal): ಮನೆಯೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸೋರಿಕೆಯಾದ (Gas leakage) ಹಿನ್ನೆಲೆ ದುರಸ್ತಿ ಮಾಡಲು ಬಂದಿದ್ದ ಭಾರತ್ ಗ್ಯಾಸ್ ಸಿಬ್ಬಂದಿಗೆ ಬೆಂಕಿ ತಗುಲಿದ ಘಟನೆ ಸರ್ಪನಕಟ್ಟೆ ಬಾಳೆಹಿತ್ತಲಿನಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಾಜಸ್ಥಾನದ ಜೋಧಪುರ ನಿವಾಸಿ ರಾಜುರಾಮ ರಿದಾಮುಲ್ಲಾ ರಾಮ ಗಾಯಗೊಂಡವರು. ಸದ್ಯ ಇವರು ಮೂಡಭಟ್ಕಳದಲ್ಲಿ ವಾಸಿಸುತ್ತಿದ್ದರು. ಇವರು ಸರ್ಪನಕಟ್ಟೆ ಬಾಳೆಹಿತ್ತಲಿನ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದ (Gas leakage) ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದರು. ಮನೆಯ ಒಳಗಡೆ ಇದ್ದ ಸೋರಿಕೆಯಾಗುತ್ತಿದ್ದ ಗ್ಯಾಸ್ ಸಿಲಿಂಡರನ್ನು ಹೊರಗಡೆ ತಂದು ರಿಪೇರಿ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನ ಹೇಗಿರಲಿದೆ ಗೊತ್ತಾ?
ಅಲ್ಲೇ ಪಕ್ಕದಲ್ಲಿನ ಬಚ್ಚಲು ಮನೆ ಬೆಂಕಿ ಸಿಲಿಂಡರ್ ಗೆ ತಗುಲಿದಾಗ ಅದನ್ನು ನಂದಿಸುವ ಸಂದರ್ಭದಲ್ಲಿ ರಾಜುರಾಮ್ ಅವರ ಕೈ ಕಾಲು ಸುಟ್ಟಿದೆ. ಆದರೂ ಯಾವುದೇ ಹಿಂಜರಿಕೆ ಇಲ್ಲದೆ ಉರಿಯುತ್ತಿದ್ದ ಬೆಂಕಿ ನಂದಿಸಿ ಮನೆ ಅವರನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ : ತೆರ್ನಮಕ್ಕಿ ಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ
ತಕ್ಷಣ ಸೂಕ್ತ ಸಮಯದಲ್ಲಿ ಮನೆ ಮಾಲೀಕರು ಹಾಗೂ ಗ್ಯಾಸ್ ಏಜೆನ್ಸಿ ಸಿಬ್ಬಂದಿ ರಾಜುರಾಮ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟಿಗ ಮನೀಶ್ ಪಾಂಡೆ ಸ್ಕೂಬಾ ಡೈವಿಂಗ್