ಭಟ್ಕಳ : ಪುರಸಭೆ ಸದಸ್ಯರ ಆಕ್ಷೇಪದ ನಡುವೆಯೂ ಎಲ್.ಪಿ.ಜಿ. ಗ್ಯಾಸ್ ಪಂಪ್ ನಿರ್ಮಾಣಕ್ಕೆ ಪುರಸಭೆಯಿಂದ ನಿರಾಪೇಕ್ಷಣಾ ಪತ್ರ ನೀಡಿರುವುದಕ್ಕೆ ಸದಸ್ಯರು ಸಾಮಾನ್ಯ ಸಭೆಯಲ್ಲಿ (general meeting) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶುಕ್ರವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ಪಟ್ಟಣದ ಸಂತೆ ಮಾರುಕಟ್ಟೆ ರಸ್ತೆಯಲ್ಲಿ ಎಲ್.ಪಿ.ಜಿ. ಗ್ಯಾಸ್ ಪಂಪ್ ನಿರ್ಮಿಸುವುದನ್ನು ಪುರಸಭೆ ಸದಸ್ಯರು ವಿರೋಧಿಸಿದ್ದರು. ಈ ಕುರಿತು ನಿರಾಪೇಕ್ಷಣಾ ಪತ್ರ ನೀಡುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದಾಗ್ಯೂ ಪುರಸಭೆಯಿಂದ ಜಿಲ್ಲಾಧಿಕಾರಿಗೆ ನೀರಾಪೇಕ್ಷಣಾ ಪತ್ರ ನೀಡಿರುವುದನ್ನು ಪುರಸಭೆ ಸದಸ್ಯರನ್ನು ಕೆರಳಿಸಿದೆ.

ಇದನ್ನೂ ಓದಿ : ಗಾಳಿ-ಮಳೆಗೆ ತೋಟ-ಮನೆ ಹಾನಿ

ಶುಕ್ರವಾರ ಪುರಭೆಯಲ್ಲಿ ಆಡಳಿತಾಧಿಕಾರಿ ಡಾ. ನಯನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ (general meeting)ಯಲ್ಲಿ ಪುರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ನೀರಾಪೇಕ್ಷಣಾ ಪತ್ರವನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ವಿಷಯ ಪ್ರಸ್ತಾಪಿಸಿದ ಸದಸ್ಯ ಫಯಾಜ್ ಮುಲ್ಲಾ, ಸದಸ್ಯರ ವಿರೋಧದ ನಡುವೆಯೂ ಗ್ಯಾಸ್ ಪಂಪ್ ನಿರ್ಮಿಸಲು ನೀರಾಪೇಕ್ಷಣಾ ಪತ್ರ ಹೇಗೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಭೆಯ ನಡಾವಳಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಯವರು ಗ್ಯಾಸ್ ಪಂಪ್ ತೆರೆಯಲು ಅವಶ್ಯ ಇರುವ ಸಂಬಂಧಪಟ್ಟ ಎಲ್ಲಾ ಇಲಾಖೆಯ ನೀರಾಪೇಕ್ಷಣಾ ಪತ್ರ ಇರಿಸಿ ಪುನಃ ಆಡಳಿತಾಧಿಕಾರಿಯವರ ಅಧಿಕಾರದಲ್ಲಿ ಪುರಸಭೆಯಿಂದ ನೀರಾಪೇಕ್ಷಣಾ ಪತ್ರ ನೀಡುವಂತೆ ಸೂಚಿಸಿದ್ದರು. ಅವರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಯವರಿಗೆ ನೀರಾಪೇಕ್ಷಣಾ ಪತ್ರ ನೀಡಲಾಗಿದೆ ಎಂದರು.

ಇದನ್ನೂ ಓದಿ : ಎಂ ಎಂ ನಾಯ್ಕ ಜಾಲಿ ನಿಧನ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಅಧ್ಯಕ್ಷ ಪರ್ವೇಜ್ ಕಾಶೀಂಜಿ ಪುರಸಭೆಯಲ್ಲಿ ಸದಸ್ಯರ ಆಡಳಿತ ಇರುವಾಗ ಆಡಳಿತಾಧಿಕಾರಿ ವೈಯಕ್ತಿಕ ನಡಾವಳಿ ಮಾಡಲು ಹೇಗೆ ಸಾಧ್ಯ? ಸದಸ್ಯರ ನಿರ್ಣಯ ನಡಾವಳಿ ಊರ್ಜಿತದಲ್ಲಿರುವಾಗ ಅದನ್ನು ರದ್ದು ಪಡಿಸದೆ, ಜಿಲ್ಲಾಧಿಕಾರಿಗಳು ಪುನಃ ನೀರಾಪೇಕ್ಷಣಾ ಪತ್ರ ನೀಡಲು ಹೇಗೆ ಆದೇಶಿಸಿದರು ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಕ್ರಮಕ್ಕೆ ಸದಸ್ಯರೆಲ್ಲರೂ ಒಕ್ಕೊರಲಿನ ಆಕ್ಷೇಪ ವ್ಯಕ್ತಪಡಿಸಿದರು. ಈಗ ನೀಡಿರುವ ನೀರಾಪೇಕ್ಷಣಾ ಪತ್ರವನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.