ಹೊನ್ನಾವರ : ನಿನ್ನೆ ದಿನ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಗೇರುಸೊಪ್ಪ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ ಗೇರುಸೊಪ್ಪ ಅಣೆಕಟ್ಟಿನ (Gerusoppa reservoir) ಐದು ಗೇಟ್‌ಗಳ ಮೂಲಕ ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇದರ ಪರಿಣಾಮ ಗೇರುಸೊಪ್ಪ ಜಲಾಶಯಕ್ಕೆ (Gerusoppa reservoir) ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ವಿದ್ಯುತ್‌ ಉತ್ಪಾದನೆ ಮಾಡುವ ಈ ಅಣೆಕಟ್ಟಿನಲ್ಲಿ ನೀರು ಶೇಖರಣೆಗೆ ಅವಕಾಶ ಇಲ್ಲದಿರುವುದರಿಂದ ಅನಿವಾರ್ಯವಾಗಿ ನೀರನ್ನು ಶರಾವತಿ ನದಿಗೆ ಬಿಡಬೇಕಾಗಿದೆ. ಹೀಗಾಗಿ ಇಂದು ಬೆಳಿಗ್ಗೆ ಐದು ಗೇಟ್‌ಗಳ ಮೂಲಕ ೨೨ ಸಾವಿರ ಕ್ಯೂಸೆಕ್ಸ್‌ ನೀರು ನದಿಗೆ ಬಿಡಲಾಗುತ್ತಿದೆ.

ಇದನ್ನೂ ಓದಿ: ಧುಮ್ಮಿಕ್ಕುವ ಜಲಧಾರೆಗೆ ವಿದ್ಯುದ್ದೀಪ; ಹೊರಹರಿವು ಹೆಚ್ಚಳ

ಶರಾವತಿ ನದಿಗೆ ಅಣೆಕಟ್ಟಿನಿಂದ ನೀರು ಬಿಟ್ಟಿರುವುದರಿಂದ ಸಹಜವಾಗಿ ಹೊನ್ನಾವರ ತಾಲೂಕಿನ ಶರಾವತಿ ನದಿ ತೀರದ ಪ್ರದೇಶಗಳಲ್ಲಿ ಆತಂಕ ಮನೆಮಾಡಿದೆ. ಪ್ರವಾಹ ಪರಿಸ್ಥಿತಿ ಎದುರಾಗುವುದರಿಂದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ನಿನ್ನೆಯಿಂದಲೇ ತಾಲೂಕಾಡಳಿತ ನದಿ ಪಾತ್ರದ ಜನರನ್ನು ಕಾಳಜಿ ಕೇಂದ್ರ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಮಾಡುತ್ತಿದ್ದಾರೆ.