ಭಟ್ಕಳ (Bhatkal) :ತಾಲೂಕಿನ ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ “ನೀರು ನೀಡಿ-ಜೀವ ಉಳಿಸಿ” (Give water – save life) ಅಭಿಯಾನವನ್ನು ಆಯೋಜಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವರ್ಷ ಬಿಸಿಲಿನ ಝಳ ಅತಿಯಾಗಿ ಹೆಚ್ಚಿದ್ದು ಇದರಿಂದ ಪ್ರಾಣಿ ಪಕ್ಷಿಗಳು ತೀವ್ರವಾಗಿ ಬಳಲುತ್ತಿವೆ. ಈ ಕಾರಣದಿಂದ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ (Save Water Save Life) ಅಭಿಯಾನದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ಪ್ರಾಣಿ ಪಕ್ಷಿಗಳ ರಕ್ಷಣೆಯ ಕೈಂಕರ್ಯದಲ್ಲಿ ಸ್ಟ ಇಚ್ಛೆಯಿಂದ ತೊಡಗಿಕೊಂಡಿರುವವರಿಗೆ ಬಹುಮಾನ ನೀಡಿ ಉತ್ತೇಜಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಬೇಸಿಗೆಯ ಈ ಸುಡು ಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸಲು ಸಂಘಟಿಸಿರುವ ವಿಶಿಷ್ಟವೂ ವಿನೂತನವೂ ಆಗಿರುವ ಈ ಅಭಿಯಾನದಲ್ಲಿ ಹೆಚ್ಚು ಜನರು ಕೈಜೋಡಿಸಬೇಕು ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ : Special Train/ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ ನಡುವೆ ವಿಶೇಷ ರೈಲು ಸಂಚಾರ

ಈ “ನೀರು ನೀಡಿ-ಜೀವ ಉಳಿಸಿ” (Give water – save life) ಅಭಿಯಾನದಲ್ಲಿ ಭಾಗವಹಿಸಿದವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಗುವುದು. ಮೊದಲ ಫಲಾನುಭವಿಗೆ ೨೦೦೦ ರೂ. ಎರಡನೇ ಫಲಾನುಭವಿಗೆ ೧೦೦೦ ರೂ. ಮೂರನೇ ಫಲಾನುಭವಿಗೆ ೫೦೦ ರೂ. ನಂತರದ ಐವರು ಫಲಾನುಭವಿಗಳಿಗೆ ತಲಾ ೧೫೦ ರೂ.ನಂತೆ ಬಹುಮಾನ ನೀಡಿ ಉತ್ತೇಜಿಸಲಾಗುವುದು. ಈ ಅಭಿಯಾನದಲ್ಲಿ ಭಾಗವಹಿಸುವವರು ಕುಡಿಯಲು ಯೋಗ್ಯವಾದ ಜಾಗದಲ್ಲಿ – ತೊಟ್ಟಿಯಲ್ಲಿ ಅಥವಾ ಪಾತ್ರೆಗಳಲ್ಲಿ ತಾಜಾ ನೀರು ತುಂಬಿಸಿ, ಪ್ರಾಣಿ-ಪಕ್ಷಿಗಳಿಗೆ ಜೀವಜಲ ಒದಗಿಸಿ ಅದರ ಪೋಟೋ ತೆಗೆದು ಸಂಪೂರ್ಣ ವಿಳಾಸದೊಂದಿಗೆ ಕೆಳಗೆ ತಿಳಿಸಿರುವ ಮೊಬೈಲ್ ನಂಬರಿಗೆ ಕಳುಹಿಸಬೇಕು.

ಇದನ್ನೂ ಓದಿ : Academy Award/ ಉತ್ತರ ಕನ್ನಡಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮಾರ್ಚ್ ೨೯ರ ಶನಿವಾರ ಫೋಟೋ ಕಳುಹಿಸಲು ಕೊನೆಯ ದಿನವಾಗಿದೆ. ಮಾರ್ಚ್ ೩೦ರ ಯುಗಾದಿ ದಿನದಂದು ಆಯ್ಕೆಯಾದವರ ಮಾಹಿತಿಯನ್ನು ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು -ತಿಮ್ಮಪ್ಪ ಶೇಡ್ಲುಳಿ: ೯೯೬೪೧೮೭೯೨೩/ ವಸಂತ ಬಬ್ಬನಕಲ್: ೯೯೮೬೧೪೪೫೪೦/ಸುರೇಶ ನಾಯ್ಕ : ೯೭೩೧೭೩೫೭೨೮/ವೆಂಕಟೇಶ ದೇವಿನಗರ: ೯೯೦೧೧೯೨೩೯೨/ದೇವೇಂದ್ರ ಗೊಂಡ: ೯೬೧೧೦೮೯೦೬೫/ವೆಂಕಟ್ರಮಣ ನಾಯ್ಕ: ೯೫೯೧೪೮೫೩೮೮/ ಗಿರೀಶ ನಾಯ್ಕ: ೯೯೦೦೪೬೮೬೪೧/ ಶ್ರೀಧರ ಖಾರ್ವಿ: ೭೭೯೫೯೭೯೭೫೭.

ಇದನ್ನೂ ಓದಿ : Heart Attack/ ದುಬೈಗೆ ಪ್ರಯಾಣಿಸುತ್ತಿದ್ದ ಭಟ್ಕಳಿಗ ನಿಧನ