ಕಾರವಾರ (Karwar) : ಡಿ.೪ರಂದು ಪಣಜಿಯ (Panjim) ಅಸ್ಕವಾಡದಲ್ಲಿ ಮಾಂಡ್ರೆಮ್ ಮಾಜಿ ಸರಪಂಚ ಮಹೇಶ್ ಕೋನಾಡ್ಕರ್ ಅವರ ಮೇಲೆ ನಡೆದ ಹಲ್ಲೆಯಲ್ಲಿ ಭಾಗಿಯಾದ ಆರು ಮಂದಿಯನ್ನು ಉತ್ತರ ಗೋವಾ (Goa) ಪೊಲೀಸರು ಶುಕ್ರವಾರ ಕಾರವಾರದಲ್ಲಿ ಬಂಧಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಓಲ್ಡ್ ಗೋವಾದ ವಿಶ್ವನಾಥ್ ಹರಿಜನ್, ಪೊರ್ವೊರಿಮ್ನ ಸುರೇಶ್ ನಾಯ್ಕ್, ಮೈನಾ-ಪಿಲರ್ನ್ನ ಸಾಯಿರಾಜ್ ಗೋವೆಕರ್, ಸೇಂಟ್ ಕ್ರೂಜ್ನ ಫ್ರಾಂಕಿ ನಾಡರ್, ಚೋರಾವ್ನ ಮನೀಶ್ ಹಡ್ಫಡ್ಕರ್ ಮತ್ತು ಪಂಜಿಮ್ನ ಉದ್ದೇಶ್ ಶೆಟ್ಟಿ ಅವರನ್ನು ಕಾರವಾರದಿಂದ (Karwar) ಬಂಧಿಸಲಾಗಿದೆ. ಇದಕ್ಕೂ ಮೊದಲು, ಮಾಂಡ್ರೆಮ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಡಲೀಕ ಹರಿಜನನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿದ್ದರು. ಮಂಡ್ರೆಮ್ನ ಅಸ್ಕವಾಡದಲ್ಲಿ ಅಪರಿಚಿತ ಮುಸುಕುಧಾರಿಗಳು ಮಾಂಡ್ರೆಮ್ ಮಾಜಿ ಸರಪಂಚ ಮಹೇಶ್ ಕೋನಾಡ್ಕರ್ ಮೇಲೆ ಬುಧವಾರ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ : ರಸ್ತೆ ಬದಿ ಬಿಸಾಡಿದ ಸ್ಥಿತಿಯಲ್ಲಿ ಶವ ಪತ್ತೆ