ನವದೆಹಲಿ (New Delhi): ಚಿನ್ನಾಭರಣ ವ್ಯಾಪಾರಿಗಳಿಂದ ಖರೀದಿ ಒತ್ತಡ ಮತ್ತು ಜಾಗತಿಕ ಮಾರುಕಟ್ಟೆಯ ಅನುಕೂಲಕರ ಪ್ರವೃತ್ತಿಯಿಂದಾಗಿ ಸೋಮವಾರ ಚಿನ್ನದ ಬೆಲೆಗಳು (Gold Rate) ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ವರದಿ ಪ್ರಕಾರ ಚಿನ್ನದ ಬೆಲೆ ₹೨೫೦ರಷ್ಟು ಏರಿಕೆಯಾಗಿದ್ದು, ಪ್ರತಿ ೧೦ ಗ್ರಾಂಗೆ ₹೭೮.೭೦೦ರಷ್ಟು ದಾಖಲೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸೋಮವಾರದ ಮೊದಲ ಸೆಷನ್ನಲ್ಲಿ, ಚಿನ್ನವು ಪ್ರತಿ ೧೦ ಗ್ರಾಂಗೆ ₹೭೮.೪೫೦ಕ್ಕೆ ತಲುಪಿತ್ತು (Gold Rate). ಆದರೆ, ಬೆಳ್ಳಿ (Silver) ಇಳಿಕೆ ಕಂಡಿದೆ. ಕಳೆದ ಶುಕ್ರವಾರ ₹ ೯೪.೨೦೦ಕ್ಕೆ ಹೋಲಿಸಿದರೆ ಪ್ರತಿ ಕಿಲೋಗ್ರಾಂಗೆ ₹ ೨೦೦ ಇಳಿಕೆಯಾಗಿ ₹ ೯೪೦೦೦ಕ್ಕೆ ತಲುಪಿದೆ. ೯೯.೫% ಶುದ್ಧತೆ ಹೊಂದಿರುವ ಚಿನ್ನವು ₹ ೨೦೦ರಷ್ಟು ಹೆಚ್ಚಳವನ್ನು ಕಂಡಿದೆ. ಅದರ ಹಿಂದಿನ ಮಟ್ಟವಾದ ₹ ೭೮೧೦೦ಗೆ ಹೋಲಿಸಿದರೆ ೧೦ ಗ್ರಾಂಗೆ ₹ ೭೮೩೦೦ರ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.
ಇದನ್ನೂ ಓದಿ : ಪ್ರತಿಭಾವಂತ ವಿದ್ಯಾರ್ಥಿಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ನೆರವು
ದೇಶೀಯ ದಾಸ್ತಾನುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಹೆಚ್ಚಿದ ಬೇಡಿಕೆಯು ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಷೇರು ಮಾರುಕಟ್ಟೆಯ (Share Market) ಕುಸಿತದಿಂದ ಅನಿಶ್ಚಿತತೆ ಕಾಡುತ್ತಿರುವದರಿಂದ ಹೂಡಿಕೆದಾರರನ್ನು ಸಾಂಪ್ರದಾಯಿಕ ಸುರಕ್ಷಿತ ಆಸ್ತಿಯಾದ ಚಿನ್ನದ ಕಡೆಗೆ ಪ್ರೇರೇಪಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.