ಶಂಕರಘಟ್ಟ : ಶಿವಮೊಗ್ಗ (Shivamogga) ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu University) ಬುಧವಾರ ನಡೆದ ಘಟಿಕೋತ್ಸವದಲ್ಲಿ (convocation) ಚಿನ್ನದ ಪದಕಗಳನ್ನು (Gold medals) ಗಿಟ್ಟಿಸಿಕೊಂಡ ಇಬ್ಬರು ವಿದ್ಯಾರ್ಥಿನಿಯರು (Golden Girls) ಗಮನ ಸೆಳೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಜೀತಾ- ಶಿವಮೊಗ್ಗ ರವೀಂದ್ರನಗರದ ಗಣಪತಿ ದೇವಸ್ಥಾನದ ಅಡುಗೆ ಭಟ್ಟ ಸುರೇಶ-ಸುಧಾ ದಂಪತಿ ಪುತ್ರಿ ಎನ್.ಎಸ್.ಸಂಜೀತಾ ಅವರು ೨೦೨೨-೨೩ನೇ ಸಾಲಿನ ನಾಲ್ಕು ಪದಕಕ್ಕೆ ಮುತ್ತಿಟ್ಟರು. ಶಿವಮೊಗ್ಗ ಕಾಶಿಪುರದ ಸಂಜೀತಾ ಅವರು ಬೆಂಗಳೂರಿನ (Bengaluru) ಜಿಕೆವಿಕೆಯ (GKVK) ಚಿಂತಾಮಣಿ ಕ್ಯಾಂಪಸ್ ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಮುಂದೆ ಪಿಎಚ್ ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ.
ಇದನ್ನು ಓದಿ : serial accident/ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸಾವು
ಪೂರ್ಣಿಮಾ – ತುಮಕೂರು (Tumkur) ಜಿಲ್ಲೆ ಶಿರಾ ತಾಲೂಕಿನ ಗೌಡರಗೆರೆಯ ಜಿ.ಎಸ್.ಪೂರ್ಣಿಮಾ ೨೦೨೩-೨೪ನೇ ಸಾಲಿನಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಜಿ.ಪಿ.ಹನುಮಂತ-ಎಲ್.ಆರ್.ರಾಜೇಶ್ವರಿ ದಂಪತಿ ಪುತ್ರಿಯಾಗಿದ್ದು ಜೆನಿಟಿಕ್ ಆ್ಯಂಡ್ ಪ್ಲ್ಯಾನ್ ಬೀಡಿಂಗ್ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಸಂಶೋಧನೆಯಲ್ಲಿ ಮುಂದುವರಿಯುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಒಂದು ತಿಂಗಳು ಸಂಶೋಧನೆಗಾಗಿ ಬ್ಯಾಂಕಾಕ್ ಗೂ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.
(golden girls)
ಇದನ್ನು ಓದಿ : Police raid/ ಜಾನುವಾರು ಮಾಂಸ ಕಡಿಯುತ್ತಿದ್ದ ಮೂವರ ಬಂಧನ