ಭಟ್ಕಳ (Bhatkal) : ತಾಲೂಕಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಗೊಂಡ (Gond) ಸಮಾಜವು ೧೫ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ದೇಶಾದ್ಯಂತ ಇರುವ ಗೊಂಡರೊಂದಿಗೆ ಒಡನಾಟವನ್ನು ಹೊಂದಿದ್ದಾರೆ ಎಂದು ಗೊಂಡ ಸಮಾಜದ ಅಭಿವೃದ್ದಿ ಸಂಘದ ಅಧ್ಯಕ್ಷ ನಾರಾಯಣ ಗೊಂಡ ಹೇಳಿದರು. ಅವರು ಕೋಗ್ತಿಯ ಶ್ರೀ ಮಹಾಸತಿ ದೇವಸ್ಥಾನದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಗೊಂಡ (Gond) ಸಮಾಜವು ಭಾರತ ದೇಶಾದ್ಯಂತ ಇರುವ ಗೊಂಡರೊಂದಿಗೆ ಒಡನಾಟವನ್ನು ಹೊಂದಿದೆ. ಅದರಂತೆ ಇತ್ತೀಚಿಗೆ ೨೧ನೇ ರಾಷ್ಟ್ರಮಟ್ಟದ ಗೊಂಡಿ ಸಾಹಿತ್ಯ ಸಮ್ಮೇಳನವನ್ನು ನಾವು ಆಯೋಜಿಸಿದ್ದೆವು. ಈ ಸಮ್ಮೇಳನದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಸಿದ್ದಿ ಬುಡಕಟ್ಟಿನವರಾದ ಶಾಂತಾರಾಮ
ಸಿದ್ದಿಯವರು ಭಟ್ಕಳ ತಾಲೂಕಿನಲ್ಲಿ ಗೊಂಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ತೊಂದರೆ ಕುರಿತು ನಮ್ಮ ಗೊಂಡ ಬುಡಕಟ್ಟಿನ ಪರವಾಗಿ ಮಾತನಾಡಿದ್ದರು. ಆದರೆ, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗೊಂಡ ಬುಡಕಟ್ಟಿನ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರದೆ ಇರುವಂತಹ
ಕೆಲವು ವ್ಯಕ್ತಿಗಳು ಶಾಂತಾರಾಮ ಸಿದ್ದಿಯವರು ಹಾಗೂ ನಮ್ಮ ಗೊಂಡ ಬುಡಕಟ್ಟಿನ ವಿರುದ್ದ ಮಾತನಾಡಿರುವುದು ಖಂಡನೀಯ ಎಂದು ಅವರು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಗೊಂಡ ಸಮಾಜ ಶಾಂತಾರಮ ಸಿದ್ದಿಯವರ ಮಾತಿಗೆ ಯಾವತ್ತೂ ಬೆಂಂಬಲವಾಗಿ ನಿಲ್ಲುತ್ತದೆ. ಗೊಂಡ ಬುಡಕಟ್ಟಿನ ಸಮಾಜದ ವಿರುದ್ಧ ಮಾತನಾಡಿದ ವ್ಯಕ್ತಿಗಳ ವಿರುದ್ದ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ನಮ್ಮ ಗೊಂಡ ಬುಡಕಟ್ಟು ಜನರ ಮೇಲೆ ಹಲವಾರು ಪಟ್ಟಭದ್ರ ಹಿತಾಶಕ್ತಿಗಳಿಂದ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ಬರದಂತೆ ತಡೆಯುವ ಪ್ರಯತ್ನಗಳಾಗುತ್ತಿವೆ. ನಮ್ಮ ಸಮಾಜದ ನೌಕರರ ಮೇಲೆ ಹಾಗೂ ರಾಜಕೀಯವಾಗಿ ಮುಂದುವರಿಯುತ್ತಿರುವವರ ಮೇಲೆ ಸುಳ್ಳು ದೂರುಗಳು ದಾಖಲಾಗುತ್ತಿವೆ.  ಗೊಂಡ ಬುಡಕಟ್ಟುಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ನೀಡುವ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಾದ ತಹಶೀಲ್ದಾರ, ಗ್ರಾಮ ಆಡಳಿತಾಧಿಕಾರಿಗಳು. ಕಂದಾಯ ನಿರೀಕ್ಷಕರು, ಉಪವಿಭಾಗದ ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಇದನ್ನೂ ಓದಿ :  ಸಂತೆಯಾಗಿ ಮಾರ್ಪಟ್ಟ ಸರ್ಕಾರಿ ಶಾಲಾವರಣ

ಗೊಂಡ ಸಮಾಜದ ಯುವ ಮುಖಂಡ ಮಂಜುನಾಥ ಗೊಂಡ ಮಾತನಾಡಿ, ೧೯೫೦ರಲ್ಲಿ ನಮ್ಮ ಗೊಂಡ ಸಮಾಜಕ್ಕೆ ಬುಡಕಟ್ಟಿನ ಪರಿಶಿಷ್ಠ ವರ್ಗದ ಪ್ರಮಾಣಪತ್ರವನ್ನು ನೀಡಲು ಪ್ರಾರಂಭಿಸಲಾಗಿತ್ತು. ಆ ಸಂದರ್ಭದಲ್ಲಿ ಕೂಡ ಉತ್ತರ  ಕನ್ನಡದಲ್ಲಿರುವ ಗೊಂಡರೆಲ್ಲರೂ ಪರಿಶಿಷ್ಟ ವರ್ಗದ ಗೊಂಡರು ಎಂದು ಸಂವಿಧಾನದಲ್ಲಿನ ಮೀಸಲು ಪ್ರಕಾರ ಪರಿಶಿಷ್ಟವರ್ಗ ಪ್ರಮಾಣ ಪತ್ರ ನೀಡುವಂತೆ ಆದೇಶ ಆಗಿತ್ತು. ಈ ಆದೇಶ ಗೆಝೇಟಿಯರ್‌ನಲ್ಲಿ ಪ್ರಕಟವಾಗಿದೆ. ಕಾಲಂ ನಂ ೯ ರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.  ಅಲ್ಲದೇ ೧೯೫೬ ರಲ್ಲಿ ಮೈಸೂರು ಸರಕಾರವು ಭಾರತ ಸರಕಾರದ ಆದೇಶದ ಮೇಲೆ ಮೈಸೂರು ಗಜೆಟಿಯರ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬುಡಕಟ್ಟಿನ ಮತ್ತು ಜಿಲ್ಲೆಗಳ ಯಾದಿಯಲ್ಲಿ ಉತ್ತರ ಕನ್ನಡ (Uttara Kannada) ಗೊಂಡ ಬುಡಕಟ್ಟಿನ ಜನರು ಪರಿಶಿಷ್ಟಿ ಪಂಗಡಕ್ಕೆ ಸೇರಿದವರು ಎಂದು ಪ್ರಕಟಿಸಿದೆ ಎಂದರು.

ಇದನ್ನೂ ಓದಿ : ಜೋಯಿಡಾ ಮೂಲದ ಪತ್ರಕರ್ತನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಸುದ್ದಿಗೋಷ್ಠಿಯಲ್ಲಿ ಗೊಂಡ ಸಮಾಜದ ಪ್ರಮುಖರಾದ ಸೋಮಯ್ಯ ಗೊಂಡ ಹಾಡುವಳ್ಳಿ, ಬಡಿಯಾ ಗೊಂಡ ಕುಂಟವಾಣಿ, ವೆಂಕಟೇಶ ಗೊಂಡ, ಹೊನ್ನಯ್ಯ ಗೊಂಡ, ರಾಘವೇಂದ್ರ ಗೊಂಡ ಜಾಲಿ, ಸುಕ್ರ ಗೊಂಡ, ಪಾರ್ವತಿ ಗೊಂಡ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :  ಭಟ್ಕಳದ ಕುವರನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ