ಭಟ್ಕಳ (Bhatkal): ತಾಲೂಕಿನ ಅಳ್ವೆಕೊಡಿ ಸಮುದ್ರದಲ್ಲಿ ಸಿಕ್ಕ ಅಪರಿಚಿತ ಶವಕ್ಕೆ ಹೆಬಳೆ ಪಂಚಾಯತ ಹಾಗೂ ಪೊಲೀಸರ ಸಹಾಯದಿಂದ ಸಮಾಜ ಸೇವೆಕ ಮಂಜು ಮುಟ್ಟಳ್ಳಿ ಹಾಗೂ ಆಂಬ್ಯುಲೆನ್ಸ್ ಚಾಲಕ ವಿನಾಯಕ ನಾಯ್ಕ ಮಣ್ಕುಳಿಯ ರುದ್ರಭೂಮಿಯಲ್ಲಿ ಸಂಸ್ಕಾರ ನೆರವೇರಿಸಿದರು (Good Deed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಫೆ. ೨೪ರಂದು ಅಳ್ವೆಕೊಡಿ ಬಂದರಿನಲ್ಲಿ ಸುಮಾರು ೫೦ ರಿಂದ ೫೫ ವರ್ಷದ ಅಪರಿಚಿತ ಗಂಡಸಿನ ಶವ ಭಟ್ಕಳದ ತೆಂಗಿನಗುಂಡಿ ಹತ್ತಿರದ ಅರಬ್ಬಿ ಸಮುದ್ರದಲ್ಲಿ ತೇಲುತ್ತಿರುವ ಶವವನ್ನು ಭಟ್ಕಳ ಕರಾವಳಿ ಕಾವಲು ಪೊಲೀಸ್ (Coast Guard) ಇಂಟರ್‌ಸೆಪ್ಪರ್ ಬೋಟ ಮೂಲಕ ಹಗ್ಗ ಕಟ್ಟಿ ಎಳೆದುಕೊಂಡು ತೆಂಗಿನಗುಂಡಿ ಬಂದರಿಗೆ ತರಲಾಗಿತ್ತು.  ಮೃತನ ಕೆಳ ತುಟಿಯನ್ನು ಮೀನುಗಳು ತಿಂದು ಗಾಯವಾಗಿತ್ತು.

ಇದನ್ನೂ ಓದಿ : Dead Body/ ಸಮುದ್ರದಲ್ಲಿ ತೇಲುತ್ತಿದ್ದ ಶವ ಪತ್ತೆ

ಭಟ್ಕಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ೭ ‌ದಿನ ಕಾಲ ಮೃತ ದೇಹವನ್ನು ಇಡಲಾಗಿತ್ತು. ಮೃತನ ಗುರುತು ಪತ್ತೆಯಾಗದೆ, ಮೃತದೇಹದ
ಸಂಬಂಧಿಕರು ಪತ್ತೆಯಾಗದ ಕಾರಣ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೆಬಳೆ ಪಂಚಾಯತ ಪಿ.ಡಿ.ಓ.ಗೆ ಹಸ್ತಾಂತರ ಮಾಡಿದರು.

ಇದನ್ನೂ ಓದಿ : Academy Award/ ಭಟ್ಕಳಕ್ಕೆ ಉರ್ದು ಅಕಾಡೆಮಿ ಪ್ರಶಸ್ತಿ

ಬಳಿಕ ಸಮಾಜ ಸೇವಕ ಮಂಜುನಾಥ ಮುಟ್ಟಳ್ಳಿ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ವಿನಾಯಕ ನಾಯ್ಕ ಸಹಯೋಗದೊಂದಿಗೆ ಮಣ್ಕುಳಿಯ ಹಿಂದೂ ರುದ್ರಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ (Good Deed). ಈ ವೇಳೆ ಠಾಣೆ ಎಎಸೈ ವಿನಾಯಕ ನಾಯ್ಕ, ಹೆಬಳೆ ಗ್ರಾಮ ಪಂಚಾಯತ ಪಿ.ಡಿ.ಓ. ಮಂಜುನಾಥ ಗೊಂಡ, ಪೋಲಿಸ ಸಿಬ್ಬಂದಿ ಅಂಬರೀಶ ಕುಂಬಾರಿ, ಕಿರಣ ಟಿಲಗಂಜಿ ಇದ್ದರು.

ವಿಡಿಯೋ ಸಹಿತ ಇದನ್ನೂ ಓದಿ : School Van Accident/ ಶಾಲಾ ವಾಹನ ಅಪಘಾತ