ಭಟ್ಕಳ: ಇಲ್ಲಿನ ಸರ್ಕಾರಿ ನೌಕರರ (Govt workers) ಸಂಘ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಉತ್ತಮ ನೌಕರರನ್ನು ಸನ್ಮಾನಿಸಿ ಪ್ರೋತ್ಸಾಹಿಸಿರುವುದು ತುಂಬಾ ಖುಷಿಯ ವಿಚಾರ.  ಭಟ್ಕಳ(Bhatkal) ತಾಲೂಕಿನ ಸರಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ಒಂದು ಮಾದರಿ ಸಂಘವಾಗಿದೆ ಎಂದು ತಹಸೀಲ್ದಾರ ನಾಗರಾಜ ನಾಯ್ಕಡ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅವರು ಭಟ್ಕಳದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ(Govt workers) ಸಂಘದ ವತಿಯಿಂದ ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ, ಸಾಧಕರಿಗೆ ಸನ್ಮಾನ, ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು. ಭಟ್ಕಳ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಅವರ ನೇತೃತ್ವದಲ್ಲಿ ಸರಕಾರಿ ನೌಕರರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಇದನ್ನೂ ಓದಿ : ಸಂತ್ರಸ್ತರಿಗೆ ಕುಡಿಯುವ ನೀರು ಪೂರೈಸಿದ ಯುವಾ ಬ್ರಿಗೇಡ್

ಭಟ್ಕಳ ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ, ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಬ್ಯಾಗ್ ನೀಡಿರುವುದು, ಗೋಶಾಲೆಗೆ ಧನ ಸಹಾಯ, ಕೋವಿಡ್-೧೯ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ(CM welfare fund) ೧,೨೫,೦೦೦ ರೂ. ಧನಸಹಾಯ, ನೌಕರರ ಮಕ್ಕಳಿಗೆ ಹೊರತುಪಡಿಸಿ ಪಿಯುಸಿ ಸೈನ್ಸ್ ,ಆರ್ಟ್ಸ್, ಕಾಮರ್ಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಘದಲ್ಲಿ ಆರ್ಥಿಕ ಸಂಪನ್ಮೂಲ ಸೋರಿಕೆಯಾಗುತ್ತಿರುವುದನ್ನ ತಡೆಗಟ್ಟಿ ಸಂಪನ್ಮೂಲವನ್ನು  ಹೆಚ್ಚಿಸಿರುವುದರ ಬಗ್ಗೆ ತಿಳಿಸಿದರು.

ಇದನ್ನೂ ಓದಿ :  ಗುಡ್ಡ ಕುಸಿತ ಸ್ಥಳ ವೀಕ್ಷಿಸಿದ ಎಚ್.ಡಿ.ಕುಮಾರಸ್ವಾಮಿ

ಕಾರ್ಯಕ್ರಮದ ಮುಖ್ಯ ಅತಿಥಿ ಬಿಇಒ ವಿ. ಡಿ. ಮೊಗೇರ ಮಾತನಾಡಿ, ಭಟ್ಕಳದ ಸರಕಾರಿ ನೌಕರರ ಸಂಘ ಕ್ರಿಯಾಶೀಲ ಸಂಘವಾಗಿದೆ. ಯಾವತ್ತೂ ಸರಕಾರಿ ನೌಕರರ ಪರ ಕೆಲಸ ಮಾಡುತ್ತಿರುವುದು ನಮಗೆ ತುಂಬಾ ಹೆಮ್ಮೆಯ ವಿಚಾರ ಎಂದರು.

ಇದನ್ನೂ ಓದಿ : ಕಾರ್ಗೋ ಹಡಗಿನಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ ಸರಕು

ಇನ್ನೋರ್ವ ಅತಿಥಿ ನ್ಯೂ ಇಂಗ್ಲೀಷ್ ಪಿ.ಯು ಕಾಲೇಜ್ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಮಾತನಾಡಿ, ಈ ಹಿಂದೆ ರಾಜ್ಯ ಹಾಗೂ ತಾಲೂಕು ಮಟ್ಟದಲ್ಲಿ ಸರಕಾರಿ ನೌಕರರ ಸಂಘ ಇದೆಯೋ ಇಲ್ಲವೋ ಎನ್ನುವುದು ಗೊತ್ತಿರಲಿಲ್ಲ. ಸಂಘದ ಒಳಿತಿಗಾಗಿ ಕೆಲಸ ಮಾಡುವ ಇಂಥವರನ್ನು ಆಯ್ಕೆ ಮಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಇದನ್ನೂ ಓದಿ : ಜುಲೈ ೨೦ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಪಿಯು ಕಾಲೇಜು (PU college) ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಲ್ಲಾಸ ನಾಯ್ಕ ಮಾತನಾಡಿದರು.
ಈ ಸಂದರ್ಬದಲ್ಲಿ  ರಾಜ್ಯ ಪ್ರಶಸ್ತಿ ಪುರಸ್ಕೃತ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಅರುಣ ಕುಮಾರ ಹಾಗೂ ಭಟ್ಕಳ ತಾಲೂಕಿನ ವಿವಿಧ ಇಲಾಖೆಯಲ್ಲಿ ಸಾಧನೆ ಮಾಡಿದ ಸಾಧಕರು, ನಿವೃತ್ತ ನೌಕರರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ, ಸಾಂಸ್ಕೃತಿಕ ಸ್ಪರ್ಧಿಗಳಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಇದನ್ನೂ ಓದಿ : ಜುಲೈ ೨೦ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ವೇದಿಕೆಯಲ್ಲಿ ಪಿ.ಎಸ್.ಐ.  ಶಿವಾನಂದ, ಕುಮಾರ ನಾಯ್ಕ, ಸುಶೀಲಾ ಮೊಗೇರ, ಸಂಶುದ್ದೀನ್ ಉಪಸ್ಥಿತರಿದ್ದರು. ಗಣೇಶ ಹೆಗಡೆ, ವಿದ್ಯಾ ಹೆಗಡೆ, ಹೇಮಾ ನಾಯ್ಕ, ಪರಮೇಶ್ವರ ನಾಯ್ಕ, ಪ್ರಕಾಶ ಶಿರಾಲಿ ನಿರ್ವಹಿಸಿದರು.