ಹೊನ್ನಾವರ (Honnavar) : ಹುಡುಗಿಯೋರ್ವಳಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಗ್ರಾ.ಪಂ. ಸದಸ್ಯನಿಗೆ ಈ ಹಿಂದೆ ಹಲವು ಬಾರಿ ತಿಳಿ ಹೇಳಿದರೂ ಎಚ್ಚೆತ್ತುಕೊಳ್ಳದೇ ಇರುವಾಗ ಕೊನೆಗೆ ಧರ್ಮದೇಟು ಬಾರಿಸಿ ಬುದ್ದಿ ಕಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈತ ಮೊಬೈಲ್ ನಂಬರ್ ಪಡೆದುಕೊಂಡು ಅಶ್ಲೀಲ ಸಂದೇಶ ರವಾನಿಸುವ ಕೆಟ್ಟ ಚಾಳಿ ರೂಡಿಸಿಕೊಂಡಿದ್ದ. ಈ ಬಗ್ಗೆ ಯುವಕನಿಗೆ ಎಚ್ಚರಿಸಲಾಗಿತ್ತು. ಕುಮಟಾ ಭಾಗದ ರಾಜಕೀಯ ಮುಖಂಡರೋರ್ವರ ಆತ್ಮೀಯರಾಗಿರುದರಿಂದ ಅವರ ಗಮನಕ್ಕೆ ತಂದು, ಬುದ್ದಿ ಹೇಳಲಾಗಿತ್ತು. ಆದರೆ, ಈ ಚಾಳಿ ನಿಲ್ಲಿಸದೇ ಇರುದರಿಂದ ಯುವಕರೇ ಮುಂದಾಗಿ ಧರ್ಮದೇಟು ನೀಡಿದ್ದಾರೆ. ಕಾಮುಕ ಯುವಕ ಹೊನ್ನಾವರ (Honnavar) ತಾಲೂಕಿನ ಸಾಲ್ಕೋಡ ಗ್ರಾ.ಪಂ. ಸದಸ್ಯನಾಗಿದ್ದು, ಊರಿಗೆ ಮಾದರಿಯಾಗಬೇಕಾದವನು ಮಾಡಿದ ಅಸಹ್ಯ ಕೆಲಸಕ್ಕೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.
ಇದನ್ನೂ ಓದಿ : ನಿಗದಿಯಾಯ್ತು ಸಾಹಿತ್ಯ ಸಮ್ಮೇಳನ ದಿನ