ಭಟ್ಕಳ (Bhatkal) : ಇಲ್ಲಿನ ಮುಗಳಿಕೋಣಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಎದುರಿರುವ ಶ್ರೀ ಅಯ್ಯಪ್ಪ (Ayyappa) ಸ್ವಾಮಿ ದೇವಸ್ಥಾನದಲ್ಲಿ ಜನವರಿ ೪ರಂದು ಶಬರಿಮಲೆ (Shabarimale) ಯಾತ್ರೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ “ಮಹಾ ಅನ್ನಸಂತರ್ಪಣೆ” ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಜನವರಿ ೪ ಶನಿವಾರ ಮುಂಜಾನೆ ಕಲಾವೃದ್ಧಿ ಹೋಮ, ಗಣಹೋಮ, ಕುಂಭಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ೧೨.೩೦ ರಿಂದ ೩.೩೦ರ ವರೆಗೆ “ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪.೩೦ಕ್ಕೆ ಶ್ರೀ ಅಯ್ಯಪ್ಪ (Ayyappa) ಸ್ವಾಮಿಯ “ಪಲ್ಲಕ್ಕಿ ಉತ್ಸವ” ಕಾರ್ಯಕ್ರಮ ನಡೆಯಲಿದೆ.  ಜನವರಿ ೫ ಮತ್ತು ೬ರ ಬೆಳ್ಳಿಗ್ಗೆ ಸ್ವಾಮಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಜನವರಿ ೭ರ ಮುಂಜಾನೆ ೯.೩೦ಕ್ಕೆ ಶಬರಿಮಲೆ ಯಾತ್ರೆಗೆ ಸ್ವಾಮಿಗಳು ಹೊರಡಲಿದ್ದಾರೆ.

ಇದನ್ನೂ ಓದಿ : ಬಾಕಡಕೇರಿ ಆಯ್ತು ಅಂಬೇಡ್ಕರ್‌ ಕಾಲೋನಿ