ಭಟ್ಕಳ (Bhatkal) : ಕಳೆದ ೨೦ ವರ್ಷಗಳಿಗೂ ಅಧಿಕ ಕಾಲದಿಂದ ರಸ್ತೆ, ಚರಂಡಿಗಾಗಿ ಹಾತೊರೆದು ಕಾಯುತ್ತಿದ್ದ ಸ್ಥಳೀಯರ ಕನಸು ಕೊನೆಗೂ ಈಡೇರಿದೆ. ಪಟ್ಟಣದ ಕಾಮಾಕ್ಷಿ ನಿಲಯದ ಬಳಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಒದಗಿಸಿದ ೧ ಕೋಟಿ ರೂ. ಅನುದಾನದಲ್ಲಿ (grant) ಕಾಂಕ್ರೀಟ್‌ ರಸ್ತೆನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದಲ್ಲಿ ಜಿಎಸ್‌ಬಿ (GSB) ಸಮಾಜದ ಮುಖಂಡ ಅಚ್ಯುತ ಕಾಮತ ಮಾತನಾಡಿ,  ೫ ಲಕ್ಷ ಅನುದಾನ (grant) ಒದಗಿಸಿ ಪೋಟೊಗೆ ಪೋಸು ಕೊಟ್ಟು ಭೂಮಿ ಪೂಜೆ ಮಾಡುವ ಅದೆಷ್ಟೊ ಜನಪ್ರತಿನಿಧಿಗಳನ್ನು ನೋಡಿದ್ದೇವೆ. ೧ ಕೋಟಿ ರೂ ಅನುದಾನ ಒದಗಿಸಿಯೂ ಸ್ಥಳಿಯರಿಂದ ಭೂಮಿ ಪೂಜೆ ನೆರವೇರಿಸಿ ವೈದ್ಯರು ಸರಳತೆ ಮೆರೆದಿದ್ದಾರೆ ಎಂದರು.

ಇದನ್ನೂ ಓದಿ :  ಲೆದರ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನೆ

ಜಿಎಸ್‌ಬಿ ಸಮಾಜದ ಇನ್ನೋರ್ವ ಮುಖಂಡ ನರೇಂದ್ರ ನಾಯಕ ಮಾತನಾಡಿ, ಕಳೆದ ೨೦ ವರ್ಷಗಳ ಸಮಸ್ಯೆಗೆ ಮುಕ್ತಿ ದೊರಕಿದೆ. ಸಚಿವ ಮಂಕಾಳ ವೈದ್ಯ ನಮ್ಮ ಮನವಿಗೆ ಸ್ಪಂದಿಸಿ, ಅನುದಾನ ಒದಗಿಸಿ ಕಾಮಗಾಗಿ ಆರಂಭಿಸಿರುವದು ಅಭಿನಂದನೀಯ ಎಂದು ಹೇಳಿದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ ಭೂಮಿ ಪೂಜೆ ನೆರವೆರಿಸಿದರು. ವೇಮೂ. ವಿನೋದ ಭಟ್ ಪೂಜೆ ನಡೆಸಿ ನಿರ್ವಿಘ್ನವಾಗಿ ಕಾರ್ಯ ನಡೆಯಲಿ ಎಂದು ಪ್ರಾರ್ಥಿಸಿದರು.

ಇದನ್ನೂ ಓದಿ : ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

ಜಿಎಸ್‌ಬಿ ಸಮಾಜದ ಮಹಿಳಾ ಮಂಡಲದ ಅಧ್ಯಕ್ಷೆ ಸುನೀತಾ ಪೈ, ಕಾಮಾಕ್ಷಿ ದೇವಸ್ಥಾನದ (Kamakshi Temple) ಟ್ರಸ್ಟಿ ಗಿರಿಧರ ನಾಯಕ, ಪ್ರಸನ್ನ ನಾಯಕ, ಗಣಪತಿ ಬಾಬಾ ಭಟ್, ವಿನೋದ ಮೋಹನ ಪಡಿಯಾರ, ಗುರುಪ್ರಸಾದ ಸಂದರ ಪಡಿಯಾರ, ವಾಸುದೇವ ನಾಯಕ, ಉದಯ ಶೆಟ್ಟಿ, ಶಾಲಿನಿ ಶೆಟ್ಟಿ, ಆಕಾಶ ಶೆಟ್ಟಿ, ನಂದು ಕಾಮಕರ್, ಗಣೇಶ ಭಟ್ಕಳ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ :  ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ