ಭಟ್ಕಳ (Bhatkal) : ಗುರುಕೃಪಾ (Gurukripa) ಸಹಕಾರಿ ಪತ್ತಿನ ಸಂಘವು ೨೦೨೩-೨೪ನೇ ಸಾಲಿನಲ್ಲಿ ೫೦ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘವು ಆರ್ಥಿಕವಾಗಿ ಪ್ರಗತ್ತಿಯತ್ತ ಮುನ್ನುಗ್ಗುತ್ತಿದೆ ಎಂದು ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು. ಅವರು ಶನಿವಾರ ಪಟ್ಟಣದ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ವಾರ್ಷಿಕ ಷೇರುದಾರರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಂಘವು ೫೩.೬೩ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸಂಘದಲ್ಲಿ ೪೪.೪೦ ಲಕ್ಷ ರೂ. ಶೇರು ಬಂಡವಾಳ ಇದೆ. ಕಳೆದ ಸಾಲಿನಲ್ಲಿ ಸದಸ್ಯರಿಂದ ೪೧.೨೭ ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಲಾಗಿದೆ. ಸಂಘವು ತನ್ನ ಸದಸ್ಯರಿಗೆ ೪೧.೯೭ ಕೋಟಿ ರೂ. ಸಾಲವನ್ನು ವಿತರಿಸಿದೆ. ವಸೂಲಿ ಪ್ರಮಾಣ ಶೇಕಡಾ ೯೦ರಷ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಮಹಿಳಾ ಸಂಘದ ಸದಸ್ಯರಿಗೆ ೫.೭೯ ಕೋಟಿ ರೂ. ಸಾಲ ವಿತರಿಸಲಾಗಿದೆ. ವಸೂಲಿ ಪ್ರಮಾಣ ಶೇಕಡಾ ೧೦೦ರಷ್ಟಿದೆ ಎಂದರು.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ

ಸಂಘದಲ್ಲಿ ೪.೮೫ ಕೋಟಿ ರೂ. ಸ್ವಂತ ಬಂಡವಾಳ ಹೊಂದಿದೆ. ಸಂಘವು ಆರ್ಥಿಕವಾಗಿ ಸದೃಢವಾಗಿದೆ. ಸಂಘವು ಹೊಸದಾಗಿ ಆರಂಭ ಮಾಡಿದ್ದ ಮಂಕಿಯ ಚಿತ್ತಾರ ಹಾಗು ಸರ್ಪನಕಟ್ಟೆಯ ಶಾಖೆಯೂ ಈ ಬಾರಿ ಗ್ರಾಹಕರ ಸಹಕಾರದಿಂದ ಲಾಭದಲ್ಲಿ ಮುನ್ನೆಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಷೇರುದಾರ ಸದಸ್ಯರಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿ ಸಂಘದ ಅಭಿವೃದ್ದಿಗೆ ಸಹಕರಿಸುವಂತೆ ಕೋರಿದರು.

ಇದನ್ನೂ ಓದಿ :  ಜಾನುವಾರು ಅಕ್ರಮ ಸಾಗಾಟ: ನಾಲ್ವರ ಬಂಧನ

ಗುರುಕೃಪಾ (Gurukripa) ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ, ನಿರ್ದೇಶಕರಾದ ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಹರೀಶ ನಾಯ್ಕ, ಶಬರೀಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ಭಾರತಿ ನಾಯ್ಕ, ವಿಜಯ ನಾಯ್ಕ ಹಾಗೂ ಪ್ರಧಾನ ವ್ಯವಸ್ಥಾಪಕ ವಾಸು ನಾಯ್ಕ ಇದ್ದರು.

ಗುರುಕೃಪಾ ಸೊಸೈಟಿಯ ಸರ್ವ ಸಾಧಾರಣ ಸಭೆಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಅಥವಾ ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.