ಭಟ್ಕಳ (Bhatkal) : ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ) ಭಟ್ಕಳದಲ್ಲಿ ಆಯೋಜಿಸಿದ್ದ ೨೪ ಗಂಟೆಗಳ ರಾಷ್ಟ್ರೀಯ ಮಟ್ಟದ ಎಐಟಿಎಂ ಕೋಡ್‌ಫೆಸ್ಟ್ ೨೦೨೫ ಹ್ಯಾಕಥಾನ್ (Hackathon) ಸ್ಪರ್ಧೆಯು ನಾವೀನ್ಯತೆ (Innovation), ಸೃಜನಶೀಲತೆ (creativity) ಮತ್ತು ತಾಂತ್ರಿಕ ಕೌಶಲ್ಯದ (technical skill) ಅದ್ಭುತ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ದೇಶದ ೩೦ ತಂಡಗಳು ಭಾಗವಹಿಸಿದ್ದವು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎಐಟಿಎಂ ಕೋಡ್‌ಫೆಸ್ಟ್ ೨೦೨೫ ಹ್ಯಾಕಥಾನ್ (Hackathon) ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಎಐಟಿಎಂನ ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರೆಹಮಾನ್ ವಿಜೇತರನ್ನು ಘೋಷಿಸಿದರು. ಒಟ್ಟು ರೂ.೨ ಲಕ್ಷ ಮೌಲ್ಯದ ಬಹುಮಾನಗಳನ್ನು ವಿತರಿಸಲಾಯಿತು. ಮೊದಲ ಬಹುಮಾನ ೬೦ ಸಾವಿರ ರೂ. ಮಂಗಳೂರಿನ (Mangaluru) ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ರ್ಯಾಶ್‌ಮ್ಯಾಕ್ಸ್ ತಂಡದ ಅಬುಲ್ ಖೈರ್ ಪಡೆದರು. ದ್ವಿತೀಯ ಬಹುಮಾನ ೩೦ ಸಾವಿರ ರೂ. ಮೈಸೂರಿನ (Mysuru) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ನ ಸೈಫರ್ನೋವಾ ತಂಡದ ಹೇಮಂತ ಸಿ.ಎಸ್. ಮತ್ತು ಮೊಹಮ್ಮದ್ ಖಮ್ರಾನ್ ಗಳಿಸಿದರು. ತೃತೀಯ ಬಹುಮಾನ ೧೫ ಸಾವಿರ ರೂ. ದಾವಣಗೆರೆಯ (Davanagere) ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಸ್ಲರ್ಸ್.ದೇವ್ ತಂಡದ ಅಹಮದ್ ಅಲಿ ಝಡ್, ಸೈಯದ್ ಇಯಾನುಲ್ಲಾ ಮತ್ತು ಎಸ್. ತೇಜಸ್ ಪಡೆದರು. ಇದರ ಜೊತೆಗೆ, ಟಾಪ್ ೧೦ ತಂಡಗಳಿಗೆ ವಿಶೇಷ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ : Silver umbrella/ ಕಾರವಾರದ ದೇಗುಲದಲ್ಲಿ ಕದ್ದ ಬೆಳ್ಳಿ ಛತ್ರಿ ಗೋವಾದಲ್ಲಿ ಪತ್ತೆ

ತೀರ್ಪುಗಾರರಾಗಿ ಎಐಟಿಎಂನ (AITM) ಹಳೆಯ ವಿದ್ಯಾರ್ಥಿಗಳಾದ ನೀವಿಯಸ್ ಸೊಲ್ಯೂಷನ್ಸ್ ಸಂಸ್ಥಾಪಕ ಮೊಹ್ಸಿನ್ ಖಾನ್, ಎಮರ್ಟೆಕ್ಸ್ ಇನ್ಫಾರ್ಮೇಷನ್ ಟೆಕ್ನಾಲಜೀಸ್‌ನ ತಂತ್ರಜ್ಞಾನ ಮುಖ್ಯಸ್ಥ ಮುಬೀನ್ ಜುಕಾಕು, ವಿನ್‌ಟೀಮ್ ಗ್ಲೋಬಲ್ ಸಂಸ್ಥಾಪಕ ವಸೀಮ್ ಅಹ್ಮದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಜೆ. ಅನ್ವರ್ ಶಾಥಿಕ್ ಮತ್ತು ಪ್ರಾಧ್ಯಾಪಕ ಡಾ. ಡೇನಿಯಲ್ ಫ್ರಾನ್ಸಿಸ್ ಕಾರ್ಯನಿರ್ವಹಿಸಿದರು. ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಸ್ವಾಗತಿಸಿದರು. ಎಐಟಿಎಂನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನದ್ದೀನ್ ಕಾರ್ಯಕ್ರಮದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿ, ಸಂಘಟಕರ ಪ್ರಯತ್ನ ಶ್ಲಾಘಿಸಿದರು. ಸಂಯೋಜಕ ಫಾರ್ಖಲಿತ್ ರಿದಾ ಮಾನ್ವಿ ವಂದಿಸಿದರು.

ಇದನ್ನೂ ಓದಿ : Ganja Seized/ ೭ ಕೆ.ಜಿ. ಗಾಂಜಾ ಹೊಂದಿದ್ದ ಭಟ್ಕಳದ ವ್ಯಕ್ತಿ ಬಂಧನ