ಕಾರವಾರ : ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ/ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ (Heavy rain forecast). ಇಂದು ಜುಲೈ ೩೦ರಂದು ಕರಾವಳಿ ಭಾಗದಲ್ಲಿ ಆರೇಂಜ್‌ ಅಲರ್ಟ್‌ ಘೋಷಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಇಂದು ಬೆಳಿಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಗುತ್ತಿದೆ. ಆರೇಂಜ್‌ ಅಲರ್ಟ್‌ ಹಿನ್ನೆಲೆ(heavy rain forecast)ಯಲ್ಲಿ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಜಿಲ್ಲೆಯ ನೆರೆ ಪರಿಸ್ಥಿತಿಯ ಕುರಿತಂತೆ 24*7 ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ : Langanamakki/ ಶರಾವತಿ‌ ನದಿ ಪಾತ್ರದ ನಿವಾಸಿ ಬಗ್ಗೆ ಎಚ್ಚರ ವಹಿಸಿ

 ಶಿರೂರು ಕಾರ್ಯಾಚರಣೆ ಮುಂದುವರಿಕೆ:

ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಇದುವರೆಗೆ ನಾಪತ್ತೆ ಯಾಗಿರುವ 3 ವ್ಯಕ್ತಿಗಳ ಹುಡುಕಾಟ ಕಾರ್ಯಾಚರಣೆಯು ಬೋಟ್ಗಳ ಮೂಲಕ ಇಂದೂ ಮುಂದುವರೆಯಲಿದೆ.  ಗಂಗಾವಳಿ ನದಿಯಲ್ಲಿ ಬ್ರಿಡ್ಜ್ ಮೌಂಟೆಡ್ ಡೈಜಿಂಗ ಮೂಲಕ ಕಾರ್ಯಚರಣೆ ನಡೆಸುವ ಕುರಿತಂತೆ ತ್ರಿಶೂರುನ ತಾಂತ್ರಿಕ ತಂತ್ರಜ್ಞರಿಂದ ಲಿಖಿತ ವರದಿ ಕೋರಿದ್ದು, ಅವರ ವರದಿಯಂತೆ ನೇವಿ, ಕೋಸ್ಟ್ ಗಾರ್ಡ್, ಎನ್.ಡಿ.ಆರ್.ಎಫ್. ಎಸ್.ಡಿ.ಆರ್.ಎಫ್ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ : ಕಾಡಿನಲ್ಲಿ ಅಟ್ಟಾಡಿಸಿ ಡಕಾಯಿತರ ಬಂಧನ

೧೭ ಮನೆಗಳಿಗೆ ಹಾನಿ :

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ೫ ಮನೆಗಳಿಗೆ ತೀವುಹಾನಿ, ೧೨  ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾರವಾರ ಮತ್ತು ಕುಮಟಾದಲ್ಲಿರುವ ೩ ಕಾಳಜಿ ಕೇಂದ್ರಗಳಲ್ಲಿ ಒಟ್ಟು ೧೧೯ ಜನರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.