ಭಟ್ಕಳ : ರಂಜಾನ್ ಹಬ್ಬ (Ramadan) ಹಾಗೂ ಶ್ರೀ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ (Brahmarathotsav) ಅಂಗವಾಗಿ ಭಟ್ಕಳ ವಿವಿಧ ಭಾಗಗಳಲ್ಲಿ ಬಾಂಬ್ ನಿಷ್ಕ್ರಿಯ ದಳ (Bomb disposal squad) ಮತ್ತು ಶ್ವಾನದಳದಿಂದ (dog squad) ತಪಾಸಣೆ ನಡೆಯಿತು (high alert).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುಸ್ಲಿಮರ ಪವಿತ್ರ ಮಾಸ ರಂಜಾನ್‌ ಉಪವಾಸ ವ್ರತಾಚರಣೆ ಸಂಪನ್ನಗೊಂಡಿದ್ದು, ಈದ್‌ ಉಲ್‌ಫಿತ್ರ್‌ (eid ul fitr) ಹಬ್ಬ ಸೋಮವಾರವಿದೆ. ಸಾವಿರಾರು ಮುಸ್ಲಿಂ ಬಾಂಧವರು ನಗರದ ಬಂದರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಮಾಡಲಿದ್ದಾರೆ. ಅಲ್ಲದೇ, ರಾಮನವಮಿ (Ram Navami) ದಿನವಾದ ಗುರುವಾರದಂದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ಪ್ರಸಿದ್ದ ಚನ್ನಪಟ್ಟಣ ಹನುಮಂತ ದೇವರ ಜಾತ್ರೆ ಸಹಸ್ರಾರು ಭಕ್ರವೃಂದದೊಂದಿಗೆ ನಡೆಯಲಿದೆ.

ಇದನ್ನೂ ಓದಿ : Ugadi Festival/ ಭಟ್ಕಳದಲ್ಲಿ ಯುಗಾದಿ ಉತ್ಸವ ಆಚರಣೆ

ಈ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್‌ ಇಲಾಖೆ ಹೆಚ್ಚಿನ ಭದ್ರತೆ ಕಲ್ಪಿಸಿದೆ (high alert). ಕಾರವಾರದಿಂದ (Karwar) ಬಂದಿದ್ದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ. ಈದ್ಗಾ ಮೈದಾನ, ಬಸ್ ನಿಲ್ದಾಣ, ಚನ್ನಪಟ್ಟಣ ಹನುಮಂತ ದೇವಸ್ಥಾನ ಒಳಗಡೆ, ದೇವಸ್ಥಾನ ಆವರಣ, ಭಟ್ಕಳ ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿ ತಪಾಸಣೆ ನಡೆಸಲಾಯಿತು.  ಈ ಸಂದರ್ಭದಲ್ಲಿ ಶ್ವಾನ ಅನಸಿಯೊಂದಿಗೆ ಎ.ಆರ್.ಎಸ್.ಐ.ಗಳಾದ ಅನಿಲ ನಾಯ್ಕ, ಜಗನ್ನಾಥ ನಾಯ್ಕ, ಸಿಬ್ಬಂದಿ ಆನಂದ ನಾಯ್ಕ, ಸಂತೋಷ ನಾಯ್ಕ, ಮಹಾಬಲೇಶ್ವರ ಗೌಡ, ಹಾಲೇಶ ನಾಯ್ಕ, ಮಹೇಶ ನಾಯ್ಕ ಇದ್ದರು.

ಇದನ್ನೂ ಓದಿ : Jewellery Seized/ ಆಭರಣ ಅಂಗಡಿಯಲ್ಲಿ ಒತ್ತೆ ಇಟ್ಟಿದ್ದ ಆಭರಣ ಜಪ್ತಿ