ಬೆಳಗಾವಿ (Belagavi) : ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ (Hindalga Jail) ಸಹಕೈದಿಯೊಬ್ಬನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿ ಮೇಲೆ ಜೈಲಿನಲ್ಲಿ ಹಲ್ಲೆ ಮಾಡಲಾಗಿದೆ. ಬಿಹಾರದ ಮೂಲದ ಸದ್ಯ ಬೆಳಗಾವಿ ರಾಮತೀರ್ಥನಗರ ನಿವಾಸಿ ಹಿತೇಶಕುಮಾರ ಚೌವ್ಹಾಣ ಹಲ್ಲೆಗೆ ಗುರಿಯಾದವರು. ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಾದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯಿಕ, ಸವಿನಾ ಸಿದ್ದಪ್ಪ ದಡ್ಡಿ ಮತ್ತು ಪ್ರಧಾನಿ ಶೇಖರ ವಾಗ್ಮೊಡೆ ಹಲ್ಲೆ ಮಾಡಿದವರು.
ಇದನ್ನೂ ಓದಿ : ಮಾರಣಾಂತಿಕ ಹಲ್ಲೆ ಯತ್ನ; ಜೀವ ಬೆದರಿಕೆ
ಸೆಪ್ಟೆಂಬರ್ ೩೦ರಂದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನಗಾ ಕೈಗಾರಿಕಾ ಪ್ರದೇಶದ ವಿನಾಯಕ ಸ್ಟೀಲ್ ಅಂಡ್ ರೋಲಿಂಗ್ ಫ್ಯಾಕ್ಟರಿ ವ್ಯವಸ್ಥಾಪಕ ಹಿತೇಶ್ ಕುಮಾರ ಚೌವ್ಹಾಣ ಮತ್ತು ಆಯುಬ್ ಖಾನ್ ಪಠಾಣ ನಡುವೆ ಹಣಕಾಸು ವಿಷಯವಾಗಿ ವಾಗ್ವಾದ ನಡೆದಿತ್ತು. ಮುತ್ಯಾನಟ್ಟಿಯ ಲಕ್ಷ್ಮಣ ದಡ್ಡಿ ಮಧ್ಯಸ್ಥಿಕೆ ವಹಿಸಲು ಹೋಗಿದ್ದ. ಆಗ ಹಿತೇಶ ಕುಮಾರ ಮತ್ತು ಲಕ್ಷ್ಮಣ ದಡ್ಡಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಲಕ್ಷ್ಮಣ ಮತ್ತು ಅವನ ಜೊತೆಗೆ ಬಂದಿದ್ದ ದಿಲೀಪ ಕಮಜಗಿ ಎಂಬವನ ಮೇಲೆ ಹಲ್ಲೆ ನಡೆಸಿದ್ದರಿಂದ ಇಬ್ಬರು ಗಾಯಗೊಂಡಿದ್ದರು. ಪೊಲೀಸರು ಹಿತೇಶ್ ಕುಮಾರನನ್ನು ಬಂಧಿಸಿ ಜೈಲಿಗೆ (Hindalga Jail) ಕಳಿಸಿದ್ದರು. ಜೈಲಿನಲ್ಲಿದ್ದ ಲಕ್ಷ್ಮಣ ದಡ್ಡಿ ಸಂಬಂಧಿಕರಿಗೆ ಹಲ್ಲೆ ವಿಷಯ ಗೊತ್ತಾಗಿ ಹಿತೇಶಕುಮಾರ ಅವರನ್ನು ಅಕ್ಟೋಬರ್ ೩ ರಂದು ಥಳಿಸಿದ್ದಾರೆ. ಹಿತೇಶ್ ಕುಮಾರ ಅವರನ್ನು ಹುಬ್ಬಳ್ಳಿ (Hubballi) ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ : ಲವ್ ಜಿಹಾದ್ ಶಂಕೆ; ಕ್ರಮಕ್ಕೆ ವಿಹಿಂಪ ಆಗ್ರಹ