ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway) ಬದಿ ನಿಂತುಕೊಂಡಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ (hit and run) ಘಟನೆ ಮುರ್ಡೇಶ್ವರದ (Murudeshwar) ಬಳಿ ಬಸ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಕಾಯ್ಕಿಣಿ ಅಬ್ರೆಯ ವಾಸು ವೆಂಕ್ಟಾ ಮರಾಠಿ (೪೬) ಗಾಯಗೊಂಡವರು. ಇವರು ಮಾ ೧೪ರಂದು ರಾತ್ರಿ ೮ ಗಂಟೆಯ ಸುಮಾರಿಗೆ ಬಸ್ತಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದ್ದಾಗ ಹೊನ್ನಾವರ (Honnavar) ಕಡೆಯಿಂದ ಭಟ್ಕಳ ಕಡೆಗೆ ಹೊರಟ ಕೆಎ-೪೭/ಎಮ್-೮೩೪೭ ಸಂಖ್ಯೆಯ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ (hit and run). ವಾಸು ಅವರ ಎಡ ಭುಜಕ್ಕೆ, ತಲೆಯ ಎಡ ಬದಿಗೆ ಹಾಗೂ ಎಡ ಕೆನ್ನೆಗೆ ಗಾಯಗಳಾಗಿದ್ದು, ಚಾಲಕ ತನ್ನ ವಾಹನವನ್ನು ನಿಲ್ಲಸದೇ ಪರಾರಿಯಾಗಿದ್ದಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಗಾಯಾಳು ಸಹೋದರ ಮಂಜುನಾಥ ವೆಂಕ್ಟಾ ಮರಾಠಿ (೩೪) ದೂರು ದಾಖಲಿಸಿದ್ದಾರೆ (case filed).



