ಭಟ್ಕಳ (Bhatkal) : ತಾಲೂಕಿನ ಮುರ್ಡೇಶ್ವರದ (Murdeshwar) ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ (Hit and Run). ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಬೈಲೂರು ಗುಡಿಗದ್ದೆ ನಿವಾಸಿ ಶಂಕರ ಮಾಬ್ಲು ದೇವಡಿಗ (೪೬) ಗಾಯಗೊಂಡವರು. ಇವರು ಭಟ್ಕಳ ಕಡೆಯಿಂದ ಹೊನ್ನಾವರ (Honnavar) ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಮಾ.೧೦ರಂದು ಮಧ್ಯಾಹ್ನ ೨.೩೦ ಗಂಟೆಗೆ ಸಿಲ್ವರ್ ಬಣ್ಣದ ಇಕೋ ಸ್ಪೋರ್ಟ್ಸ್ ಕಾರು (ಕೆಎ-೦೩-ಎಮ್‌ಎಸ್-೭೯೪೦) ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ (Hit and Run). ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ಚಾಲಕ ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿಕೊಂಡು ಬಂದಿರುವುದಾಗಿ ದೂರಲಾಗಿದೆ.
ಇದನ್ನೂ ಓದಿ : KFD/ ಉತ್ತರ ಕನ್ನಡದಲ್ಲಿ ೧೮ ಮಂಗಗಳ ಸಾವು
ರಾಷ್ಟ್ರೀಯ ಹೆದ್ದಾರಿಯಿಂದ ಮುರುಡೇಶ್ವರ (Murudeshwar) ದೇವಸ್ಥಾನದ ರಸ್ತೆ ಕಡೆಗೆ ಹೋಗಲು ಒಮ್ಮೇಲೆ ಬಲಕ್ಕೆ ತಿರುಗಿಸಿದ್ದರಿಂದ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಕುರಿತು ಹೊನ್ನಾವರ ತಾಲೂಕಿನ ಅನಂತವಾಡಿಯ ಸೂಳೆಬೀಳು ವಾಸಿ ಜ್ಞಾನೇಶ ಮಂಜುನಾಥ ದೇವಡಿಗ ದೂರು ದಾಖಲಿಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ದೂರು ದಾಖಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : cattle protect/ ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳ ರಕ್ಷಣೆ