ಭಟ್ಕಳ (Bhatkal) : ಮೊನ್ನೆಯಷ್ಟೇ ನಿಧನರಾದ ನಾಡಿನ ಹಿರಿಯ ಸಾಹಿತಿ ನಾ.ಡಿಸೋಜ (Na Dsouza) ಅವರಿಗೆ ತವರಿನ ಶ್ರದ್ಧಾಂಜಲಿ (Home Tribute) ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲ್ಲೂಕಿನ ಅಳಿವೆಕೊಡಿಯಲ್ಲಿ ಮಂಗಳವಾರ ನಡೆಯುತ್ತಿರುವ ಭಟ್ಕಳ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾ. ಡಿಸೋಜರಿಗೆ (Na Dsouza) ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಅವರ ಭಾವಚಿತ್ರಕ್ಕೆ ಸಚಿವ ಮಂಕಾಳ ವೈದ್ಯ (Mankal Vaidya) ಆದಿಯಾಗಿ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ನಂತರ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಇದನ್ನೂ ಓದಿ : ಅಧಿಕಾರಿಗಳ ಮೇಲೆ ಕಾನೂನು ಕ್ರಮದ ಎಚ್ಚರಿಕೆ
ನಾ. ಡಿಸೋಜ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿ ಬೆಳೆದರೂ ಅವರ ತಂದೆ ತಾಯಿ ಭಟ್ಕಳ ತಾಲೂಕಿನವರು. ಮುರ್ಡೇಶ್ವರದ ಚಂದ್ರಹಿತ್ಲು ಮೂಲದವರು. ಅವರ ತಂದೆ ಶಿಕ್ಷಕ ವೃತ್ತಿಗಾಗಿ ಕುಟುಂಬ ಸಮೇತ ಸಾಗರಕ್ಕೆ ವಲಸೆ ಹೋಗಿದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಖಾಸಗಿ ಬಸ್ ಹರಿದು ವೃದ್ಧೆ ದುರ್ಮರಣ