ಶಿರಸಿ (Sirsi) : ಶ್ರೀ ಮಾರಿಕಾಂಬಾ ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ತೆರೆಕಂಡಿದೆ. ಹೊನ್ನಾವರ ತಾಲೂಕು ಪಂಚಾಯತ ಸಮಗ್ರ ವೀರಾಗ್ರಣಿ (Honavar TP Veeragrani) ಪ್ರಶಸ್ತಿ ಗಳಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಒಟ್ಟು ೧೨ ತಾಲ್ಲೂಕು ಪಂಚಾಯತಿಗಳ ತಂಡಗಳ ಪೈಕಿ ಅತೀ ಹೆಚ್ಚು ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದುಕೊಂಡು ೬೯ ಅಂಕಗಳನ್ನು ಗಳಿಸಿದ ಹೊನ್ನಾವರ (Honavar) ತಾಲೂಕು ಪಂಚಾಯತ್‌ಗೆ (Honavar TP Veeragrani) ಪ್ರಥಮ ಹಾಗೂ ೫೨ ಅಂಕ ಗಳಿಸಿದ ಸಿದ್ದಾಪುರ (Siddapur) ತಾಲೂಕು ಪಂಚಾಯತ್‌ಗೆ ದ್ವಿತೀಯ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಪ್ರದಾನ ಮಾಡಿದರು.

ಇದನ್ನೂ ಓದಿ : ಗಾಂಜಾ ಸೇವಿಸಿದ ಕಾರವಾರದ ಯುವಕ‌ ಸೆರೆ

ಈ ವೇಳೆ ಮಾತನಾಡಿದ ಜಿಪಂ ಸಿಇಒ, ಎಲ್ಲರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಕ್ರೀಡಾ ಮನೋಭಾವದಿಂದ ಆಡಿದ್ದಾರೆ. ಸೋಲು ಗೆಲುವನ್ನು ಲೆಕ್ಕಿಸದೇ ಸ್ಪೂರ್ತಿದಾಯಕವಾಗಿ ಪ್ರತಿಯೊಂದು ಕ್ರೀಡೆಯಲ್ಲಿ ಆಟವಾಡಿದ್ದಾರೆ. ಕ್ರೀಡಾಕೂಟ ಆಯೋಜನೆಗೆ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನಾರ್ಹರು ಎಂದರು.

ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಸೈಕಲ್‌ ಸವಾರಗೆ ಗಾಯ