ಭಟ್ಕಳ (Bhatkal) : ರಸ್ತೆಯಲ್ಲಿ ಸಿಕ್ಕ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣದ (gold ornaments) ಬ್ಯಾಗ್ ವಾರಸುದಾರರಿಗೆ ನೀಡುವ ಮೂಲಕ ಭಟ್ಕಳದಲ್ಲಿ ವ್ಯಕ್ತಿಯೋರ್ವ ಪ್ರಾಮಾಣಿಕತನ (Honesty) ಮೆರೆದಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಫಾತಿಮಾ ಕೌಸರ್‌ ನಿಸಾರ್‌ ಅಹ್ಮದ್‌ ರುಕ್ನುದ್ದೀನ್‌ ಬ್ಯಾಗ್‌ ಕಳಕೊಂಡವರು. ಭಟ್ಕಳದ ನಾಗಪ್ಪ ನಾಯಕ ರಸ್ತೆಯ ಹುಸೇನ್‌ ಶೇಖ್‌ ಹಸನ್‌ ಜಾಫರ್‌ ಶೇಖ್‌ ಬ್ಯಾಗ್‌ ಮರಳಿಸಿ ಪ್ರಾಮಾಣಿಕತನ (Honesty) ಮೆರೆದಿದ್ದಾರೆ. ಫಾತಿಮಾ ಕೌಸರ್  ಮಂಗಳವಾರದಂದು ತಮ್ಮ ವಾಸದ ಮನೆಯನ್ನು ಬದಲಾವಣೆ ಮಾಡಲು ಮನೆಯ ಸಾಮಗ್ರಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುತ್ತಿದ್ದ ವೇಳೆ ಸುಮಾರು ೨೦ ಲಕ್ಷದ ಬಂಗಾರದ ಆಭರಣಗಳ ಹ್ಯಾಂಡ್ ಬ್ಯಾಗ್ ರಸ್ತೆ ಮಧ್ಯದಲ್ಲಿ ಕಳೆದು ಹೋಗಿತ್ತು.

ಇದನ್ನೂ ಓದಿ : car collision/ ಕಾರು ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರಿಗೆ ಗಾಯ

ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಹುಸೇನ್ ಶೇಖ್‌ ಹಸನ್ ಜಾಫರ್ ಶೇಖ್‌ ಅವರಿಗೆ ಚಿನ್ನಾಭರಣದ ಬ್ಯಾಗ್ ಸಿಕ್ಕಿತ್ತು. ನಂತರ ಅವರು ಭಟ್ಕಳ ಸ್ಥಳೀಯ ಸಾಯಿಲ್ ಆನ್ಲೈನ್ ಮಾಧ್ಯಮದವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ವಾರಸುದಾರರನ್ನು ಪತ್ತೆ ಮಾಡಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ಬಂದು  ಬಂಗಾರದ ಆಭರಣಗಳನ್ನು ಕಳೆದುಕೊಂಡ ಮಹಿಳೆಗೆ ಮರಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿ.ಎಸ್.ಐ. ನವೀನ್ ಎಸ್ ನಾಯ್ಕ ಹಾಗೂ ಎ.ಎಸ್.ಐ. ರವಿ ನಾಯ್ಕ ಉಪಸ್ಥಿತರಿದ್ದರು.

ಇದನ್ನೂ ಓದಿ : road accident/ ರಸ್ತೆ ಅಪಘಾತದಲ್ಲಿ ಮುಂಡಗೋಡಿನ ಟೆಕ್ಕಿ ಸಾವು