ಹೊನ್ನಾವರ (Honnavar) : ತಾಲೂಕಿನ ಕಾಸರಕೋಡ ಬಂದರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮೀನುಗಾರರನ್ನು ಪೊಲೀಸರು ಬಂಧಿಸಿರುವುದಕ್ಕೆ ಮೀನುಗಾರ ಸಮುದಾಯದ ಬಾಲಕಿಯೋರ್ವಳು ಸಖತ್ ಗರಂ ಆಗಿದ್ದಾಳೆ. ಸ್ಥಳೀಯ ಶಾಸಕರೂ ಆಗಿರುವ ಮೀನುಗಾರಿಕೆ ಮತ್ತು ಉಸ್ತುವಾರಿ ಸಚಿವರಾಗಿರುವ ಮಂಕಾಳ ವೈದ್ಯರ (Mankal Vaidya) ಮೌನ ಬಾಲಕಿ ಅಪೇಕ್ಷಾಳ ಆಕ್ರೋಶಕ್ಕೆ ಕಾರಣವಾಗಿದೆ. ಆಕೆ ಮಾಧ್ಯಮಕ್ಕೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ (video viral) ಆಗಿದೆ.
ಬಾಲಕಿ ಅಪೇಕ್ಷಾ ಹೇಳಿದ್ದೇನು? ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ರೀಲ್ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಮಂಗಳವಾರ ಬೆಳಿಗ್ಗೆ ಹೊನ್ನಾವರ (Honnavar) ತಾಲೂಕಿನ ಕಾಸರಕೋಡಿನಲ್ಲಿ ವಾಣಿಜ್ಯ ಬಂದರು (commercial port) ನಿರ್ಮಾಣ ಸರ್ವೆ ನಡೆಯುತ್ತಿತ್ತು. ಇದನ್ನು ವಿರೋಧಿಸಿ ನಿಷೇಧಾಜ್ಞೆ ನಡುವೆಯೂ ಮೀನುಗಾರರು ಪ್ರತಿಭಟನೆಗೆ ಇಳಿದಿದ್ದರು. ಸ್ಥಳೀಯ ಮೀನುಗಾರರಿಗೆ ರಕ್ಣಣೆ ನೀಡಬೇಕು. ನಮ್ಮ ಸ್ಥಳದಲ್ಲಿ ಯಾವುದೆ ವಾಣಿಜ್ಯ ಬಂದರು ಮಾಡುವಂತಿಲ್ಲಾ ಎಂದು ಮೀನುಗಾರರು ಹೋರಾಟ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿದ್ದರೂ ಅಲ್ಲಿ ಮಿನುಗಾರರು ಸರ್ವೆ ಮಾಡಲು ಅಡ್ಡಿ ಪಡಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ : Drama/ ಫೆ. ೨೭ರಂದು ೭೦ನೇ ವರ್ಷದ ನಾಟಕ ಪ್ರದರ್ಶನ
ಬಂಧಿತ ಮೀನುಗಾರರನ್ನು ಬಿಡದಿದ್ದರೆ ಅಪೇಕ್ಷಾ ಎಂಬ ಬಾಲಕಿ ಅತ್ಮಹತ್ಯೆ ಮಾಡಿಕೊಳ್ಳುವದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಮಗೆ ನ್ಯಾಯ ಬೇಕು. ಮೀನುಗಾರ ಸಚಿವರಾದ ಮಂಕಾಳ ವೈದ್ಯರು ನಮಗೆ ನ್ಯಾಯ ಕೊಡಿಸಬೇಕು. ಅವರು ಸಚಿವರಾಗುವ ಮೊದಲು ನಮಗೆ ಹೇಳಿದ್ದರು. ಯಾವುದೇ ವಾಣಿಜ್ಯ ಬಂದರು ಅಗಲು ಬಿಡುವುದಿಲ್ಲ, ನಾನು ನಿಮ್ಮ ಜೊತೆ ಇರುತ್ತೇನೆ ಎಂದವರು ಇವತ್ತು ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಸಚಿವರು ಸ್ಥಳಕ್ಕೆ ಬರಲಿಲ್ಲ ಎಂದು ಬಾಲಕಿಯ ಆಕ್ರೋಶದ ನುಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ : Police Raid/ ಇಸ್ಪೀಟ್ ಅಡ್ಡೆಗೆ ಭಟ್ಕಳ ಪೊಲೀಸರ ದಾಳಿ