ಹೊನ್ನಾವರ (Honnavar) : ನ್ಯಾಯಾಲಯದ ಅನುಮತಿ (Court Permission) ಮತ್ತು ಭಟ್ಕಳ (Bhatkal) ಡಿವೈಎಸ್‌ಪಿಯವರ ಸರ್ಚ್ ವಾರಂಟ್‌ನೊಂದಿಗೆ (Search Warrant) ದಾಳಿ ನಡೆಸಿದ ಹೊನ್ನಾವರ ಠಾಣೆ ಪೊಲೀಸರು ಜೂಜಾಟ ಆಡುತ್ತಿದ್ದ ೧೭ ಜನರನ್ನು ವಶಕ್ಕೆ ಪಡೆದಿದ್ದಾರೆ (Police arrest). ಪಿಎಸೈ ಮಂಜುನಾಥ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊನ್ನಾವರ ತಾಲೂಕಿನ ಪ್ರದೀಪ ಶೆಟ್ಟಿ ನಾಗಪ್ಪ ಶೆಟ್ಟಿ, ಮಲ್ಲೇಶ, ಮುಗ್ವಾದ ಹಳಗೇರಿಯ ಮಂಜುನಾಥ ಸುಬ್ರಾಯ ಗೌಡ(೫೬), ದೇವಾ ಕೃಷ್ಣ ಗೌಡ (೪೫), ಕಾಸರಕೋಡ ಕೆಳಗಿನೂರು ನಿವಾಸಿ ಮಂಜುನಾಥ ಕನ್ಯಾ ಗೌಡ (೩೫), ಆರೋಳ್ಳಿಯ ಗಣೇಶ ಲಕ್ಷ್ಮಣ ಗೌಡ (೩೭), ಸುಬ್ರಾಯ ಕೃಷ್ಣ ಗೌಡ (೩೬), ನಗರೆ ಬೇರೋಳ್ಳಿಯ ರಮೇಶ ಮಂಜುನಾಥ ಗೌಡ (೩೩), ಕರ್ಕಿ ತೊಪ್ಪಲಕೇರಿಯ ವಿಶ್ವನಾಥ ನಾರಾಯಣ ನಾಯ್ಕ (೫೭), ಗುಣವಂತೆ ಕೆರೆಮನೆಯ ನಾರಾಯಣ ಹೊನ್ನಪ್ಪ ನಾಯ್ಕ (೪೦), ನೀಲ್ಕೋಡ ನಿವಾಸಿ ಗಣಪಯ್ಯ ರಾಮಚಂದ್ರ ಗೌಡ (೬೩), ಹಳದೀಪುರದ ಈರಪ್ಪನಹಿತ್ಲ ನಿವಾಸಿ ನಾರಾಯಣ ರಾಮಾ ಹರಿಕಾಂತ (೪೦), ಉದ್ಯಮನಗರದ ದಾಮೋದರ ರಾಮ ಮೇಸ್ತ (೫೪), ಮಂಕಿಯ ಹೊಸಹಿತ್ಲ ವಾಸಿ ವಿಷ್ಣು ಜಟ್ಟಿ ಹರಿಕಂತ್ರ (೩೫), ಕುಮಟಾ (Kumta) ತಾಲೂಕಿನ ಬಾಡದ ವಾಸುದೇವ ಮಾದೇವ ನಾಯ್ಕ (೬೭), ಅಳ್ವೆಕೋಡಿಯ ಈಶ್ವರ ರಾಮಾ ನಾಯ್ಕ (೫೭) ಮತ್ತು ಉಡುಪಿ (Udupi) ಜಿಲ್ಲೆಯ ಕುಂದಾಪುರ (Kundapur) ತಾಲೂಕಿನ ಗಂಗೊಳ್ಳಿಯ ಶ್ರೀನಿವಾಸ ರಾಮಾ ಖಾರ್ವಿ (೬೪) ಪೊಲೀಸರು ವಶಕ್ಕೆ (Police arrest) ಪಡೆದ ಆರೋಪಿಗಳು.
ಇದನ್ನೂ ಓದಿ : amendment in Waqf Bill/ ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ಭಟ್ಕಳದಲ್ಲಿ ಪ್ರತಿಭಟನೆ
ಮಾ. ೨೭ರಂದು ಸಂಜೆ ೬.೩೫ರ ಸುಮಾರರಿಗೆ ಹೊನ್ನಾವರ ಪಟ್ಟಣದ ಕಿಂತಾಲಕೇರಿಯಲ್ಲಿರುವ ಹೆಗಡೆ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿರುವ ಫ್ರೇಂಡ್ಸ ಕ್ಲಬ್‌ನಲ್ಲಿ ಇಸ್ಪೀಟ್
ಅಂದರ-ಬಾಹರ ಜುಗಾರಾಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ೧೭೫೬೦ ರೂ. ನಗದು ಮತ್ತು ಆಟಕ್ಕೆ ಬಳಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.