ಭಟ್ಕಳ (Bhatkal) : ಯುರೋಪಿನ (Europe) ಹಂಗೇರಿಯಲ್ಲಿ (hangeri) ನಡೆದ ವಲ್ಡ್ ಚಾಂಪಿಯನ್ ಕಿಕ್ ಬಾಕ್ಸಿಂಗ್ (kick boxing) ಸ್ಪರ್ಧೆಯಲ್ಲಿ ಭಾರತ ದೇಶಕ್ಕೆ ಚಿನ್ನ (Gold medal) ಹಾಗೂ ಬೆಳ್ಳಿ (Silver medal) ಪದಕವನ್ನು ಗಳಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಕೋಚ್ ನಾಗಶ್ರೀ ವಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು(honor).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ (Uttara Kannada) ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳ ಹಾಗೂ ಸದಸ್ಯರುಗಳ ಮಾಸಿಕ ಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು(honor). ಭಟ್ಕಳದ ಅಲೈಯನ್ಸ ಮಾರ್ಷಲ್ ಆರ್ಟ್ಸ್ (Martial Arts) ತರಬೇತಿ ಕೇಂದ್ರದಲ್ಲಿ ನಡೆದ ಮಾಸಿಕ ಸಭೆಯ ನೇತೃತ್ವವನ್ನು ಅಸೋಸಿಯೇಷನ್ ಅಧ್ಯಕ್ಷ ಅರವಿಂದ ನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ, ಉಪಾಧ್ಯಕ್ಷ ಈಶ್ವರ ನಾಯ್ಕ, ಕಾನೂನು ಸಲಹೆಗಾರ ಮನೋಜ ನಾಯ್ಕ, ಪದಾಧಿಕಾರಿಗಳಾದ ಮಹಮ್ಮದ್ ಇಸ್ಮಾಯಿಲ್, ಪುನೀತ್, ಅಮರ್ ಶಾ, ಜುಹೇಬ್, ರಾಘವೇಂದ್ರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಎಂದ ಪ್ರತಿಭಟನಾಕಾರರು