ಭಟ್ಕಳ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುಮಾಸ್ಯ (Chathurmasya) ಕಾರ್ಯಕ್ರಮ ಕರಿಕಲ್‌ ಧ್ಯಾನ ಮಂದಿರದಲ್ಲಿ ನಡೆಯುತ್ತಿದೆ‌. ಚಾತುರ್ಮಾಸ್ಯದ ೩ನೇ ದಿನವಾದ ಮಂಗಳವಾರ ಮಾವಳ್ಳಿ ಭಾಗದ ಬೈಲೂರು ನಾಮಧಾರಿ ಕೂಟದಿಂದ ಹೊರೆಕಾಣಿಕೆ(horekanike) ಅರ್ಪಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಸುಮಾರು ೫೦೦ಕ್ಕೂ ಹೆಚ್ಚು ಭಕ್ತಾದಿಗಳು ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶಿಸ್ತುಬದ್ಧವಾಗಿ ಮೆರವಣಿಗೆಯ ಮೂಲಕ ಹೊರೆಕಾಣಿಕೆ (horekanike) ತಂದು ಅರ್ಪಿಸಿದರು. ನಂತರ ಬೈಲೂರಿನ ಈಶ್ವರ ನಾಯ್ಕ ನೇತೃತ್ವದಲ್ಲಿ ನಾಮಧಾರಿ ಸಮಾಜದ ಭಕ್ತರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.

ಇದನ್ನೂ ಓದಿ : ಶಾಲೆ ಕುಸಿತ; ಮನೆಯ ಮಹಡಿಗೆ ಶಾಲೆ ಸ್ಥಳಾಂತರ

ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಾಯಂಕಾಲ ಸಂಪೂರ್ಣ ರಾಮಾಯಣ ಯಕ್ಷಗಾನ ನಡೆಯಿತು.

ಇದನ್ನೂ ಓದಿ :  ಉರುಳಿದ ಶಾಲಾ ಬಸ್; ವಿದ್ಯಾರ್ಥಿಗಳಿಗೆ ಗಾಯ

ಈ ಸಂದರ್ಭದಲ್ಲಿ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ.ನಾಯ್ಕ, ಭಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಚಾತುರ್ಮಾಸ್ಯ ಕಾರ್ಯಕ್ರಮದ ಅಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಸುಬ್ರಾಯ ನಾಯ್ಕ, ಗೋಪಾಲ ನಾಯ್ಕ, ಭಾಸ್ಕರ ನಾಯ್ಕ ಕೃಷ್ಣ ಪೃಥ್ವಿ, ಶ್ರೀಧರ ನಾಯ್ಕ, ವಿನಾಯಕ ನಾಯ್ಕ ಇದ್ದರು.