ಭಟ್ಕಳ (Bhatkal) : ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಮುಂಬಾಗಿಲನ್ನು ಮುರಿದು ಒಳಹೊಕ್ಕ ಕಳ್ಳರು ೪೦ ಗ್ರಾಂ ಚಿನ್ನಾಭರಣವನ್ನು‌ ಕದ್ದು (House theft) ಪರಾರಿಯಾದ ಘಟನೆ ತಾಲೂಕಿನ ಮುರುಡೇಶ್ವರ (Murudeshwar) ಪೊಲೀಸ್‌ ಠಾಣಾ ವ್ಯಾಪ್ತಿಯ ತೆರ್ನಮಕ್ಕಿ ಕಟಗೇರಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಎರಡು ವರ್ಷದಿಂದ ಮಮತಾ ಕೃಷ್ಣ ಶೆಟ್ಟಿ ಎನ್ನುವವರು ತಮ್ಮ ತವರು ಮನೆಯಲ್ಲಿ ವಾಸವಾಗಿದ್ದಾರೆ. ನವೆಂಬರ್ ೨ ಶನಿವಾರದಂದು ದೀಪಾವಳಿಯ ಹಬ್ಬದ ಹಿನ್ನೆಲೆ ತನ್ನ ಗಂಡ ಮಕ್ಕಳ‌ ಜೊತೆಗೆ ತವರು ಮನೆಗೆ ಬೀಗ ಹಾಕಿ ತಾಲೂಕಿನ ತಲಗೋಡಿನ ತನ್ನ ಗಂಡ ಮನೆಗೆ ತೆರಳಿದ್ದರು. ಹಬ್ಬದ ಆಚರಣೆಗೆ ತವರು ಮನೆಗೆ ಬೀಗವನ್ನು ಹಾಕಿ ತೆರಳಿದ್ದರು. ನವೆಂಬರ್ ೩ರಂದು ಮಮತಾ ಶೆಟ್ಟಿ ಅವರ ಸಹೋದರ ಮನೋಜ ಶೆಟ್ಟಿ ಕಟಗೇರಿ  ಮನೆಗೆ ಬಂದಿದ್ದರು. ಸಂಜೆ ೭ ಗಂಟೆಗೆ ಪೂಜೆ ಮಾಡಿ, ಮನೆಗೆ ಬೀಗ ಹಾಕಿ ತಮ್ಮ ಮನೆಗೆ ತೆರಳಿದ್ದರು.

ಇದನ್ನೂಓದಿ:  ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಮಾರನೇ ದಿನ ನವೆಂಬರ್ ೪ ಸೋಮವಾರದಂದು ಬೆಳಿಗ್ಗೆ ೬.೩೦ರ ಸುಮಾರಿಗೆ ದೇವರ ಪೂಜೆ ಮಾಡಲೆಂದು ಸಹೋದರ ಮನೋಜ ಮತ್ತೆ ಬಂದಿದ್ದರು. ಮನೆಯ ಬಾಗಿಲು ತೆರೆದಾಗ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು.  ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಒಡೆದು ಒಳ ಹೋಗಿ ಗೊದ್ರೇಜ್ ಕಪಾಟನ್ನು ತೆರೆದು ಅದರಲ್ಲಿದ್ದ ವಸ್ತುವನ್ನು ಚೆಲ್ಲಾಪಿಲ್ಲಿಯಾಗಿಸಿದ್ದು ಕಂಡುಬಂದಿದೆ. ತಕ್ಷಣ ಮನೋಜ ಶೆಟ್ಟಿ ಕರೆ ಮಾಡಿ, ಸಹೋದರಿ ಮಮತಾ ಶೆಟ್ಟಿ ಅವರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ :  ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ

ಈ ಕುರಿತು ಮಮತಾ ಶೆಟ್ಟಿ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಮನೆಯ ಒಳಗಡೆ ಹೋಗಿ ನೋಡಿದಾಗ ದೇವರ ಕೋಣೆಯ ಮುಂದೆ ಇಟ್ಟಿರುವ ಗೊದ್ರೇಜ್ ಕಪಾಟ ಮತ್ತು ಮಲಗುವ ಕೋಣೆಯಲ್ಲಿದ್ದ ಗೊದ್ರೇಜ್ ಕಪಾಟ ಮುರಿದು ಅದರಲ್ಲಿದ್ದ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇವರ ಕೋಣೆಯ ಮುಂದೆ ಇಟ್ಟಿರುವ ಗೊದ್ರೇಜ್ ಕಪಾಟಿನಲ್ಲಿ ಬಂಗಾರದ ಆಭರಣಗಳಿದ್ದವು. ಅವೆಲ್ಲ ಚಿನ್ನಾಭರಣಗಳು ಗೋದ್ರೆಜನಲ್ಲಿ ಇಲ್ಲವಾಗಿದ್ದು ಕಂಡು ಬಂದಿರುವ ಬಗ್ಗೆ (House theft) ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :  ನವೆಂಬರ್‌ ೫ರಂದು ವಿವಿಧೆಡೆ ಅಡಿಕೆ ಧಾರಣೆ

ನವೆಂಬರ್ ೩ರ ರಾತ್ರಿ 7 ಗಂಟೆಯಿಂದ ನವೆಂಬರ್ ೪ರ ಬೆಳಿಗ್ಗೆ ೬.೩೦ರ ನಡುವಿನ ಅವಧಿಯಲ್ಲಿ ಮನೆಯ ಬಾಗಿಲಿನ ಬೀಗ ಮುರಿದು ಮನೆಯಲ್ಲಿನ ೨ ಗೋದ್ರೇಜ್ ಕಪಾಟಿನ ಬಾಗಿಲನ್ನು ಮುರಿದಿದ್ದಾರೆ. ಗೋದ್ರೇಜ್‌ನಲ್ಲಿದ್ದ ೧೦ ಗ್ರಾಂ ಬಂಗಾರದ ಚೈನು – ಒಂದು, ಒಟ್ಟು ೧೫ ಗ್ರಾಂ‌ ತೂಕದ ಕೈ ಉಂಗುರ -೫,  ಒಟ್ಟು ೧೫ ಗ್ರಾಂ ತೂಕದ ಬಂಗಾರದ ಕಿವಿ ಒಲೆ -೨ ಸೇರಿ ಒಟ್ಟು ೪೦ ಗ್ರಾಂ ತೂಕದ ೧.೪೦ ಲಕ್ಷ ರೂ. ಮೌಲ್ಯದ  ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಮಮತಾ ಶೆಟ್ಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ :  ನವೆಂಬರ್‌ ೫ರಂದು ವಿವಿಧೆಡೆ ಅಡಿಕೆ ಧಾರಣೆ

ಪ್ರಕರಣವನ್ನು ದಾಖಲಿಸಿಕೊಂಡ ಮುರುಡೇಶ್ವರ ಪೋಲೀಸರು ತನಿಖೆ ಕೈಗೊಂಡಿದ್ದಾರೆ.  ಕಾರವಾರದಿಂದ (Karwar) ಸ್ಥಳಕ್ಕೆ ಬೆರಳಚ್ಚು ಮತ್ತು ಡಾಗ್ ಸ್ಕಾಡ್ (dog squad) ತಂಡ ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಮುರುಡೇಶ್ವರ ಪೊಲೀಸ್‌ ಠಾಣೆಯ ಸಿ.ಎಚ್.ಸಿ. ವಸಂತ ಎಮ್. ಮುಕ್ರಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಬೆರಳಚ್ಚು ತಂಡದವರು ಕತ್ತಿಯಲ್ಲಿನ ಬೆರಳಚ್ಚು ಮಾದರಿಯನ್ನು ಪಡೆದುಕೊಂಡಿದ್ದಾರೆ. ಬೇರೆ ಪ್ರಕರಣದ ಆರೋಪಿಗಳ ಜೊತೆಗೆ ಹೋಲಿಕೆಯನ್ನು ಮಾಡುತ್ತಿದ್ದು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ :   ವರ್ಗಾವಣೆ ವಿಚಾರದಲ್ಲಿ ೨ ಲಕ್ಷ ನಾನೇ ಕೊಟ್ಟಿದ್ದೆ

ಕಪಾಟು ಮುರಿಯಲು ಮನೆಯ ಕತ್ತಿ ಬಳಕೆ: ಮನೆಯ ಮುಂಭಾಗದ ಬಾಗಿಲನ್ನು ಹೇಗೋ ಪ್ರಯತ್ನ ಪಟ್ಟು ಮುರಿದು ಒಳಗೆ ಬಂದ ಕಳ್ಳರು ಮನೆಯಲ್ಲಿ ವಸ್ತುವನ್ನೆಲ್ಲ ಹುಡುಕಾಟ ನಡೆಸಿದ್ದು ಚೆಲ್ಲಾಪಿಲ್ಲಿಯಾಗಿಸಿದ್ದಾರೆ. ಬಳಿಕ ಮನೆಯಲ್ಲಿನ ದೇವರ ಕೋಣೆಯ ಮುಂದೆ ಇಟ್ಟಿರುವ ಕಪಾಟ ಮತ್ತು ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ಅಡುಗೆ ಮನೆಯಲ್ಲಿದ್ದ ಕತ್ತಿಯನ್ನು ಬಳಸಿ ಮುರಿದಿದ್ದಾರೆ. ಎರಡೂ ಕಪಾಟಿನ ಬಾಗಿಲು ಮುರಿದು ಚಿನ್ನವನ್ನು ಕದ್ದು ಕತ್ತಿಯನ್ನು ಕಪಾಟಿನ ಬಳಿಯೇ ಇಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ :  ದಿಢೀರ್ ವರ್ಗಾವಣೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ್ರಾ?