ಭಟ್ಕಳ: ನಗರ ಭಾಗದಲ್ಲಿ ನಡೆಯಲಿರುವ ಬೃಹತ್ ‘ನಗರ ಹಿಂದೂ ಸಂಗಮ’ ಕಾರ್ಯಕ್ರಮದ ಅಂಗವಾಗಿ ಶನಿವಾರ ಪಟ್ಟಣದಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ (bike rally) ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರ್ಯಾಲಿ ಚನ್ನಪಟ್ಟಣದ ಹನುಮಾನ್ ದೇವಸ್ಥಾನದಿಂದ ಆರಂಭವಾಗಿ ಆಸರಕೇರಿ, ಮಗದುಮ್ ಕಾಲೋನಿ, ಸರ್ಕಲ್, ರಂಗಿಕಟ್ಟೆ, ಹುರುಳಿಸಾಲ, ಸಾಗರ ರಸ್ತೆ ಮೂಲಕ ಮತ್ತೆ ಸರ್ಕಲ್ ದಾಟಿ ಪಿಎಲ್ಡಿ ಬ್ಯಾಂಕ್ ರಸ್ತೆವರೆಗೆ ಸಾಗಿತು. ಬಳಿಕ ಪುನಃ ಚನ್ನಪಟ್ಟಣ ಹನುಮಾನ್ ದೇವಸ್ಥಾನಕ್ಕೆ ಆಗಮಿಸುವ ಮೂಲಕ ಬೈಕ್ ರ್ಯಾಲಿ (bike rally) ಮುಕ್ತಾಯಗೊಂಡಿತು.

arrested/ ಹೆದ್ದಾರಿಯಲ್ಲಿ ದರೋಡೆ ಸಂಚು: ಹುರುಳಿಸಾಲ ಯುವಕನ ಬಂಧನ

ರ್ಯಾಲಿಯಲ್ಲಿ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ, ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ ಎನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ, ಸಿಪಿಐ ದಿವಾಕರ ಪಿ ಎಂ, ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ ಎಸ್ ಮುರ್ನಾಲ ಹಾಗೂ ನಗರ ಠಾಣೆ ಪಿಎಸ್ಐ ನವೀನ್ ಎಸ್ ನಾಯ್ಕ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Draft notification/ ಭಟ್ಕಳ ನಗರಸಭೆಗೆ ವಾರ್ಡ್ ವಿಂಗಡಣೆ: ಕರಡು ಅಧಿಸೂಚನೆ ಪ್ರಕಟ