ಭಟ್ಕಳ (Bhatkal) : ತಾಲೂಕಿನ ಶಿರಾಲಿಯ ಆಟೋ ಚಾಲಕರು (Auto drivers) ಹೋಳಿ ಹಬ್ಬದಲ್ಲಿ ಸಂಗ್ರಹಿಸಿದ ಹಣವನ್ನು ೬ ವರ್ಷದ ಕ್ಯಾನ್ಸರ್ ಪೀಡಿತ ಮಗುವಿಗೆ ನೀಡಿ ಮಾನವೀಯತೆ (Humanity) ಮೆರೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಾಲಿಯ ತಟ್ಟಿಹಕ್ಕಲ್ ನಿವಾಸಿ ಆರು ವರ್ಷ ಮಗು ಯಶ್ಚಿತಾ ಲಕ್ಷ್ಮಣ ದೇವಾಡಿಗ ದುರ್ದೈವವಶಾತ್‌ ಕ್ಯಾನ್ಸರ್ ಕಾಯಿಲೆಗೆ (cancer decease) ತುತ್ತಾಗಿ ಮಣಿಪಾಲಿನ (Manipal) ಕಸ್ತೂರ್ಬಾ ಆಸ್ಪತ್ರೆಗೆ (Kasturba Hospital) ದಾಖಲಾಗಿದ್ದಾಳೆ. ಈಕೆಯದ್ದು ತೀರಾ ಬಡ ಕುಟುಂಬವಾಗಿದ್ದು, ತಂದೆ-ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ದಾನಿಗಳು ಪುಟಾಣಿಯ ಚಿಕಿತ್ಸೆಗೆ ಧನ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಶಿರಾಲಿಯ ಆಟೋ ಚಾಲಕರು ಬಾಲಕಿಯ ಮನೆಗೆ ತೆರಳಿ ಹೋಳಿ ಹಬ್ಬದಂದು ತಾವು ಸಂಗ್ರಹಿಸಿದ ೨೫,೨೬೦ ರೂ. ಹಣವನ್ನು  ನೀಡಿ ಮಾನವೀಯತೆ (Humanity) ಮೆರೆದಿದ್ದಾರೆ.

ಇದನ್ನೂ ಓದಿ : Annabhagya/ ಎರಡು ತಿಂಗಳ ಅಕ್ಕಿ ವಿತರಣೆ

ಈ ಸಂದರ್ಭದಲ್ಲಿ ದಾಸ ನಾಯ್ಕ, ಪರಶುರಾಮ ನಾಯ್ಕ, ಶಿವಾನಂದ ನಾಯ್ಕ, ಕೇಶವ ನಾಯ್ಕ, ಪರಮೇಶ್ವರ ದೇವಾಡಿಗ, ತಿಮಪ್ಪ ನಾಯ್ಕ, ಕುಪ್ಪ ನಾಯ್ಕ, ನಾಗರಾಜ ದೇವಾಡಿಗ, ಮಾದೇವ ನಾಯ್ಕ, ಪಾಂಡು ದೇವಾಡಿಗ, ವಸಂತ ದೇವಾಡಿಗ, ಸುರೇಂದ್ರ, ಗಣಪತಿ ನಾಯ್ಕ, ಅಣ್ಣಪ ನಾಯ್ಕ,ಈಶ್ವರ ನಾಯ್ಕ, ಪಾಂಡು ದೇವಾಡಿಗ, ರಾಮಚಂದ್ರ ನಾಯ್ಕ, ಯೋಗೇಶ ನಾಯ್ಕ ಹಾಗೂ ಇತರ ಆಟೋ ಚಾಲಕರು- ಮಾಲಕರು ಉಪಸ್ಥಿತರಿದ್ದರು.

ಇದನ್ನೂ ಓದಿ : training/ ರಾಷ್ಟ್ರಮಟ್ಟದ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

ಈ ಪುಟಾಣಿ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಬೇಕೆಂದರೆ A/C NUMBER-೩೬೯೧೩೩೨೦೩೩೭, IFSC CODE – SBIN೦೦೦೦೨೬೯ ಈ ಖಾತೆಗೆ ಹಣ ವರ್ಗಾಹಿಸಬಹುದಾಗಿದೆ.helping hands yakshita