ಹೊನ್ನಾವರ : ಮನೆಯಿಂದ ಹೋದ ಗಂಡ ಕಾಣೆಯಾಗಿದ್ದು(missing), ಹುಡುಕಿಕೊಡುವಂತೆ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೋರ್ವಳು ದೂರು ದಾಖಲಿಸಿದ್ದಾಳೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಚಂದಾವರದ ಚರ್ಚ್‌ ಹತ್ತಿರದ ನಿವಾಸಿ , ಇಲೆಕ್ಟ್ರಿಶಿಯನ್‌  ಪ್ರಕಾಶ ಡಿಯೋಗ ನರೋನ್ಹಾ (೩೨) ನಾಪತ್ತೆಯಾದವರು(missing). ಇವರು ಜುಲೈ ೨೭ರಂದು ಮಧ್ಯಾಹ್ನ ೧೨ ಗಂಟೆಯಿಂದ ಜುಲೈ ೨೮ರ ಬೆಳಿಗ್ಗೆ ೧೧ ಗಂಟೆಯ ನಡುವಿನ ಅವಧಿಯಲ್ಲಿ ಕಾಣೆಯಾಗಿದ್ದಾರೆ. ಮನೆಯಿಂದ ಎಲ್ಲಿಯೋ ಹೋದವರು ಈವರೆಗೆ ಮರಳಿ ಬಂದಿಲ್ಲ ಎಂದು ಪ್ರಕಾಶರ ಪತ್ನಿ ವೆಲೆನ್ಸಿಯಾ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಲಾರಿ ಡಿಕ್ಕಿಯಾಗಿ ಬೈಕ್‌ ಸವಾರರಿಗೆ ಗಾಯ

ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಸರ್ಕಾರಿ ನೌಕರರ ಮೇಲೆ ಹಲ್ಲೆ, ದೂರು ದಾಖಲು