ಭಟ್ಕಳ (Bhatkal) : ಇಲ್ಲಿನ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಪರೀಕ್ಷೆಯಲ್ಲಿ ಸತತ  ೧೧ನೇ ಸಾಲಿನಲ್ಲೂ ಶೇ.೧೦೦ ರಷ್ಟು ಫಲಿತಾಂಶ ಪಡೆದು (ICSE result) ಸಾಧನೆ ಮಾಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್ ದೇವಾಡಿಗ ೯೧.೪೦%,  ಧನುಷ್ ಮೊಗೇರ ೯೧.೨೦%,  ತೊಹಿಬಾ ಶೆಖ್ ೯೧%, ಅಕ್ಷರ ಜೈನ  ೯೧%, ಅದಿತಿ ಶೆಟ್ಟಿ ೯೦.೪೦%  ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟೂ ೨೦ ವಿದ್ಯಾರ್ಥಿಗಳಲ್ಲಿ ೧೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ (ICSE result).

ಇದನ್ನೂ ಓದಿ : ganja/ ಭಟ್ಕಳಕ್ಕೂ ವಿಜಯವಾಡಾಕ್ಕೂ ಗಾಂಜಾ ನಂಟು