ಕಾರವಾರ (Karwar) : ಎರಡು ಹೆಚ್ಚುವರಿ ಪಿ ೧೧೩೫.೬ ಫಾಲೋ-ಆನ್ ಹಡಗುಗಳಲ್ಲಿ ಮೊದಲನೆಯದಾದ ಐಎನ್‌ಎಸ್ ತುಶಿಲ್ (INS Tushil) ರಷ್ಯಾದಿಂದ ಡಿ.೧೪ರಂದು ಶುಕ್ರವಾರ ತನ್ನ ತವರು ಬಂದರು ಕಾರವಾರಕ್ಕೆ ಆಗಮಿಸಿದೆ. ಸುಮಾರು ೧೨,೫೦೦ ನಾಟಿಕಲ್ ಮೈಲುಗಳಷ್ಟು ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಾರತೀಯ ನೌಕಾಪಡೆ (Indian Navy)  ಸ್ಟೆಲ್ತ್-ಗೈಡೆಡ್ ಮಿಸೈಲ್ ಫ್ರಿಗೇಟ್ ಕಳೆದ ಡಿ.೯ರಂದು ರಷ್ಯಾದ ಕಲಿನಿನ್‌ಗ್ರಾಡ್‌ನಲ್ಲಿ ನಿಯೋಜಿಸಲಾಗಿತ್ತು. ಅಂದು ರಕ್ಷಣಾ ಸಚಿವ (Defence Minister) ರಾಜನಾಥ ಸಿಂಗ್ (Rajnath Singh), ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಮತ್ತು ರಷ್ಯಾದ ನೌಕಾಪಡೆಯ ಕಮಾಂಡರ್ ಇನ್ ಚೀಫ್ ಅಡ್ಮಿರಲ್ ಅಲೆಕ್ಸಾಂಡರ್ ಅಲೆಕ್ಸೆವಿಚ್ ಮೊಯಿಸೆಯೆವ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : Waterfall/ ನೀರುಪಾಲಾದ ಇಬ್ಬರು ಯುವಕರು

ಡಿಸೆಂಬರ್ ೧೮, ೨೦೨೪ ರಂದು ರಷ್ಯಾದ ಕಲಿನಿನ್‌ಗ್ರಾಡ್‌ನಿಂದ ಐಎನ್‌ಎಸ್‌ ತುಶೀಲ್‌ (INS Tushil) ನೌಕಾಯಾನ ಆರಂಭಿಸಿತ್ತು. ಪ್ರಯಾಣದ ವೇಳೆ ಮೂರು ಖಂಡಗಳಾದ್ಯಂತ ಎಂಟು ದೇಶಗಳಿಗೆ ಭೇಟಿ ನೀಡಿದೆ. ಲಂಡನ್ (ಯುನೈಟೆಡ್ ಕಿಂಗ್‌ಡಮ್), ಕಾಸಾಬ್ಲಾಂಕಾ (ಮೊರಾಕೊ), ಡಾಕರ್ (ಸೆನೆಗಲ್), ಲೋಮ್ (ಟೋಗೊ), ಲಾಗೋಸ್ (ನೈಜೀರಿಯಾ), ವಾಲ್ವಿಸ್ ಬೇ (ನಮೀಬಿಯಾ), ಡರ್ಬನಿಕ್ (ನಮೀಬಿಯಾ), ಡರ್ಬನಿಕಾ (ನಮೀಬಿಯಾ) ಮತ್ತು ವಿಕ್ಟೋರಿಯಾ (ಸೀಶೆಲ್ಸ್‌) ಬಂದರುಗಳಿಗೆ ಭೇಟಿ ನೀಡುವ ಮೂಲಕ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಿಕೊಂಡಿದೆ. ಬಂದರು ಭೇಟಿಗಳ ಸಮಯದಲ್ಲಿ, ಐಎನ್‌ಎಸ್‌ ತುಶಿಲ್ ನೌಕೆಯು ಮೊರಾಕೊ, ಸೆನೆಗಲ್, ನೈಜೀರಿಯಾ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ನೌಕಾಪಡೆಗಳೊಂದಿಗೆ ಸಮುದ್ರ ಪಾಲುದಾರಿಕೆ ವ್ಯಾಯಾಮಗಳನ್ನು (MPX) ಕೈಗೊಂಡಿತು. ಇದಲ್ಲದೆ, ಹಡಗು ಗಿನಿಯಾ ಕೊಲ್ಲಿಯಲ್ಲಿ ಗಸ್ತು ತಿರುಗಿತ್ತು.

ಇದನ್ನೂ ಓದಿ : Vader Swamiji/ ಭಟ್ಕಳ ಎಜುಕೇಶನ್ ಟ್ರಸ್ಟಿನ ಮತ್ತೊಂದು ಮೈಲುಗಲ್ಲು

ಕಾರವಾರಕ್ಕೆ ಆಗಮಿಸಿದ ಹಡಗಿಗೆ ವಿದ್ಯುಕ್ತ ಸ್ವಾಗತ ನೀಡಲಾಗಿದೆ. ಈ ಹಡಗಿನ ಸಿಬ್ಬಂದಿ ಏಳು ತಿಂಗಳ ನಂತರ ಅವರ ಕುಟುಂಬಗಳನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಕುಟುಂಬಗಳಿಂದ ಜೋರಾದ ಹರ್ಷೋದ್ಘಾರ ಮೊಳಗಿತು.

ಇದನ್ನೂ ಓದಿ : PI Transfer / ಉತ್ತರ ಕನ್ನಡ ಜಿಲ್ಲೆಯ ಮೂವರು ಪಿಐ ವರ್ಗ