ಭಟ್ಕಳ: ಗ್ಯಾರಂಟಿ ನ್ಯೂಸ್ (guarantee news) ಸಂಪಾದಕಿ ರಾಧಾ ಹಿರೇಗೌಡರ್ (Radha Hiregoudar) ಅವರಿಗೆ ಕಾಂಗ್ರೆಸ್ ಹಿರಿಯ ಮುಖಂಡ (congress leader) ಆರ್ ವಿ ದೇಶಪಾಂಡೆ (R V Deshpande )ತೋರಿಸಿದ ವರ್ತನೆ (Insult’ to journalist) ಮಹಿಳೆಯರಿಗೆ ಅವಮಾನವಾಗಿದೆ ಎಂದು ಬಿಜೆಪಿ (BJP) ಉತ್ತರ ಕನ್ನಡ (Uttarakannada) ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಸಾಮಾಜಿಕ ಜಾಲತಾಣದಲ್ಲಿ (social media) ಕಿಡಿಕಾರಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
“ಆಸ್ಪತ್ರೆ ಕುರಿತು ಹಿರೇಗೌಡರ್ ಕೇ ಳಿದ ಪ್ರಶ್ನೆಗೆ, ದೇಶಪಾಂಡೆ ಅವರು ತಾಯ್ತನ ಮತ್ತು ಹೆರಿಗೆ ಸಂಬಂಧಿಸಿದ ಹಾವಭಾವ ತೋರಿದ್ದು, ಇದು ಸಂಪೂರ್ಣ ಬೇಜವಾಬ್ದಾರಿಯದ್ದಾಗಿದೆ (Insult’ to journalist). ಅನೇಕ ಬಾರಿ ಸಚಿವರಾಗಿದ್ದು, ಜಿಲ್ಲೆ ಉಸ್ತುವಾರಿ ವಹಿಸಿರುವ, ಪ್ರಸ್ತುತ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ವ್ಯಕ್ತಿಯು ಬೇಜವಾಬ್ದಾರಿತನದ ಮಾತುಗಳನ್ನು ಹೇಳಿದ್ದು, ಮಹಿಳಾ ಪತ್ರಕರ್ತರ ಬಾಯಿ ಮುಚ್ಚುವ ಪ್ರಯತ್ನ. ಇದು ನಾಡಿನ ಸ್ತ್ರೀಕುಲಕ್ಕೆ ನೋವು ತಂದಿದೆ” ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: bike collision/ ಬೈಕ್ ಡಿಕ್ಕಿಯಾಗಿ ಮಹಿಳೆ, ಎರಡು ವರ್ಷದ ಮಗುವಿಗೆ ಗಾಯ
“ಕಾಂಗ್ರೆಸ್ ನಾಯಕರು ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯದ ಬಗ್ಗೆ ಜೋರಾಗಿ ಮಾತನಾಡುತ್ತಾರೆ. ಆದರೆ ನಿಜವಾದ ಗೌರವವನ್ನು ಮಹಿಳೆಯರಿಗೆ ನೀಡದವರು ಸಮಾಜದಿಂದ ಏನು ನಿರೀಕ್ಷಿಸಬಹುದು? ನಾವು ಕನಿಷ್ಠ ಗೌರವವನ್ನು ಮಾತ್ರ ಅಪೇಕ್ಷಿಸುತ್ತೇವೆ. ಆರ್ ವಿ ದೇಶಪಾಂಡೆ ತಕ್ಷಣವೇ ರಾಧಾ ಹಿರೇಗೌಡರ್ ಮತ್ತು ನಾಡಿನ ಎಲ್ಲಾ ಮಹಿಳೆಯರ ಕ್ಷಮೆಯಾಚಿಸಬೇಕು” ಎಂದು ಶಿವಾನಿ ಶಾಂತಾರಾಮ್ ಒತ್ತಾಯಿಸಿದ್ದಾರೆ.
ಇದನ್ನು ಓದಿ: sports meet/ ಭಟ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರೆನ್ನೆಸ್ ಸಾಧನೆ



