ಹೊನ್ನಾವರ (Honavar) : ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ತನಿಖೆ ಕೈಗೊಂಡ ಮಂಕಿ ಠಾಣೆಯ ಪೊಲೀಸರು ಒಂದೇ ದಿನದಲ್ಲಿ ಇಬ್ಬರು ಆರೋಪಿತರನ್ನು ಬಂಧಿಸಿ, ಕಾರು ಮತ್ತು ಕಳವುಗೈದ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ (Bhatkal) ಕಿದ್ವಾಯಿ ರಸ್ತೆ ನಿವಾಸಿ ಮೊಹಮ್ಮದ್ ರಾಹಿಕ್ ಮೊಹಮ್ಮದ್ ಗೌಸ್(೨೩) ಮತ್ತು ಕುಂದಾಪುರ (Kundapur) ಮೂಡುಗೋಪಾಡಿ ಮೂಲದ ಶಫಾದ್ ಮಹಮ್ಮದ್ ಗೌಸ್ (೧೮) ಬಂಧಿತರು. ಮೊಹಮ್ಮದ್ ರಾಹಿಕ್ ಕಾರು ವಾಷ್ ಮಾಡುವ ವೃತ್ತಿ ಮಾಡುತ್ತಿದ್ದರೆ, ಶಫಾದ್ ಬೆಂಗಳೂರು ಕೆಫೆಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಇವರಿಬ್ಬರೂ ಮಂಕಿ ಮಾವಿನಕಟ್ಟಾದ ಗಣೇಶ ಕಾಂಪ್ಲೆಕ್ಸ್‌ನಲ್ಲಿರುವ ಎಂ.ಎಂ.ಪಿ. ಅಗ್ರಿಕಲ್ಚರ್ ಮಷಿನ್ ಮತ್ತು ಪವರ್ ಟೂಲ್ಸ್ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದರು. ಸೆ.೧೮ರಂದು ಸಂಜೆ ೭.೩೦ರಿಂದ ಮರುದಿನ ೭ ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನವಾಗಿತ್ತು. ಅಂಗಡಿಯ ಶಟರ್ಸನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು ಅಂಗಡಿಯ ಒಳಗೆ ನುಗ್ಗಿದ್ದರು. ಅಲ್ಲದೆ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿಟ್ಟಿದ್ದ ಮಂಕಿ ಅನಂತವಾಡಿಯ ಕೃಷ್ಣ ತಿಮ್ಮೇಗೌಢ ಟಿಪ್ಪರ್ ಮತ್ತು ಜೆಸಿಬಿಯ ಎರಡು ಬ್ಯಾಟರಿಗಳನ್ನುಕಳ್ಳತನ ಮಾಡಿಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಸಹಾಯಕ ಆಯುಕ್ತರ ಮನವಿಗೆ ಜಗ್ಗದ ಪ್ರತಿಭಟನಾಕಾರರು
ಕಳ್ಳತನ ನಡೆದಿರುವ ಬಗ್ಗೆ ಅಂಗಡಿಯ ಮಾಲೀಕ ಮಾಗೋಡು ನಿವಾಸಿ ಶ್ರೀಪಾದ ಮಂಜುನಾಥ ನಾಯ್ಕ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿತರನ್ನು ಪತ್ತೆ ಹಚ್ಚಿದ ಪೊಲೀಸರು ಕಳ್ಳತನವಾದ ಎರಡು ಬ್ಯಾಟರಿ, ಕೃತ್ಯಕ್ಕೆ ಬಳಸಿದ ಮಾರುತಿ ಕಾರು ಮತ್ತು ಒಂದು ಕಬ್ಬಿಣದ ರಾಡ್ ವಶಕ್ಕೆ ಪಡೆದಿದ್ದಾರೆ. ಆರೋಪಿತರನ್ನು ಹೊನ್ನಾವರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ : ಸೆಪ್ಟೆಂಬರ್ ೨೦ರಂದು ವಿವಿಧೆಡೆ ಅಡಿಕೆ ಧಾರಣೆ
ಮಂಕಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಭರತಕುಮಾರ ವಿ., ಶ್ರೀಕಾಂತ ರಾಥೋಡ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ರಾಜು ಗೌಡ, ಬಸವನಗೌಡ ಬಿರಾದಾರ, ವಿವೇಕ ನಾಯ್ಕ, ನಿತಿನ್ ನಾಯ್ಕ್, ಭಟ್ಕಳ ಗ್ರಾಮೀಣ ಠಾಣೆಯ ಸಿಬ್ಬಂದಿಯವರಾದ ಮಂಜುನಾಥ ಗೊಂಡ, ನಿಂಗನಗೌಡ ಪಾಟೀಲ ಮತ್ತು ಮಂಕಿ ಠಾಣಾ ಸಿಬ್ಬಂದಿ ಪಾಲ್ಗೊಂಡಿದ್ದರು. ಉತ್ತರ ಕನ್ನಡ (uttara kannada) ಎಸ್ಪಿ ನಾರಾಯಣ ಎಂ., ಎಎಸ್ಪಿಗಳಾದ ಸಿ.ಟಿ.ಜಯಕುಮಾರ ಮತ್ತು ಜಗದೀಶ ಎಂ., ಭಟ್ಕಳ ಡಿವೈಎಸ್ಪಿ ಮಹೇಶ ಕೆ., ಭಟ್ಕಳ ಗ್ರಾಮೀಣ ವೃತ್ತದ ಪಿಐ ಸಂತೋಷ ಕಾಯ್ಕಿಣಿ ಮಾರ್ಗದರ್ಶನ ನೀಡಿದ್ದರು. ಪ್ರಕರಣ ಪತ್ತೆ ಹಚ್ಚಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ