ಭಟ್ಕಳ (Bhatkal) : ಕೇಂದ್ರ ಸರ್ಕಾರದ (central government) ಜಲ ಜೀವನ ಮೀಷನ್ (Jal Jeevan Mission) ಯೋಜನೆ ಮಧ್ಯಪ್ರದೇಶದಲ್ಲಿ (Madhya Pradesh) ಸಮರ್ಪಕವಾಗಿ ಜಾರಿಯಾಗಿ ಅಂತರಾಷ್ಟ್ರೀಯ ರ್ಯಾಂಕಿಂಗ್ ಪಟ್ಟಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ(Internation recognition). ಇದೇ ಮೊದಲ ಬಾರಿಗೆ ಭಾರತದ ಒಂದು ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಇದರ ರೂವಾರಿ ಉತ್ತರ ಕನ್ನಡ ಜಿಲ್ಲೆ ಮೂಲದ ಐ.ಎ.ಎಸ್. ಅಧಿಕಾರಿ ತೇಜಸ್ವಿ ನಾಯ್ಕ ಎಂಬುದು ಉತ್ತರ ಕನ್ನಡ ಜಿಲ್ಲೆಯ ಜನರು ಹೆಮ್ಮೆಪಡುವಂತಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರತಿ ಮನೆಗೂ ಶುದ್ದ ಕುಡಿಯುವ ನೀರು ಸಿಗಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ (Jal Jeevan Mission) ಇದರ ಆಡಳಿತ ನಿರ್ದೇಶಕರಾಗಿ ಮಧ್ಯಪ್ರದೇಶ ರಾಜ್ಯದ ಐ.ಎ.ಎಸ್. ಶ್ರೇಣಿಯ ಅಧಿಕಾರಿಯಾಗಿದ್ದ ತೇಜಸ್ವಿ ನಾಯ್ಕ ಸೇವೆ ಸಲ್ಲಿಸಿದ್ದರು. ಈ ವೇಳೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅದರ ಸದುಪಯೋಗ ಸಿಗುವಂತೆ ಪರಿಣಾಮಕಾರಿಯಾಗಿ ಅದರ ಅನುಷ್ಠಾನ ಮಾಡಿದ್ದರು.
ಇದನ್ನೂ ಓದಿ : ಸಾಧಕರ ತರಬೇತುದಾರಳಿಗೆ ಸನ್ಮಾನ
ಪರಿಸರ ಸಂರಕ್ಷಣೆ ಹಾಗೂ ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ನಡೆಸುವ ಏಷಿಯಾ ಫೆಸಿಪಿಕ್ ಅವಾರ್ಡ ಎನ್ನುವ ಸಂಸ್ಥೆ ಮಧ್ಯಪ್ರದೇಶದ ಜಲ ಜೀವನ ಮಿಷನ್ ಬಗ್ಗೆ ಅಧ್ಯಯನ ನಡೆಸಿ ಅಂತರಾಷ್ಟ್ರೀಯ ರ್ಯಾಂಕಿಂಗ್ ಗೆ ಅರ್ಹತೆಗೊಳಿಸಿ, ಪ್ರಶಂಸಿದೆ. ಉತ್ತರ ಕನ್ನಡ (Uttara Kannada) ಸಿದ್ದಾಪುರ (Siddapur) ತಾಲೂಕಿನವರಾದ ಐ.ಎ.ಎಸ್. ಅಧಿಕಾರಿ ತೇಜಸ್ವಿ ನಾಯ್ಕ ಅವರ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಪ್ರಸ್ತುತ ಅವರ ಕೇಂದ್ರ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ : ಅಂದರ್-ಬಾಹರ್ ಆಡುತ್ತಿದ್ದ ಐವರ ವಿರುದ್ಧ ಪ್ರಕರಣ